ಕೊಪ್ಪಳ ಡಿಸೆಂಬರ್ 21 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಜಿಲ್ಲೆ ಅಭಿವೃದ್ಧಿಯ ಮೂಲಾಧಾರ (District as Fulcrum of Development) ಎಂಬ ವಿಷಯದ ಕುರಿತು ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯಾದರ್ಶಿಗಳಿಗೆ ಡಿಸೆಂಬರ್ 20 ರಂದು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಬಿ.ಫೌಜಿಯಾ ತರುನ್ನುಮ್ ಅವರು ಸಹ ಕರ್ನಾಟಕವನ್ನು ಪ್ರತಿನಿಧಿಸಿ ವಿಷಯ ಮಂಡನೆ ಮಾಡಿದರು.


ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಅವರ ಸಮ್ಮುಖದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಅವರ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮೂಲಾಧಾರದ ಬಗ್ಗೆ ಅವಲೋಕನ ಮಾಡಿದರು. ಇದೆ ವೇಳೆ ಸಿಇಓ ಅವರು, ಪ್ರಾತ್ಯಕ್ಷಿಕೆಯ ಮೂಲಕ, ಮಹಿಳಾ ಸಬಲೀಕರಣದಡಿ ಕೊಪ್ಪಳ ಜಿಲ್ಲೆಯು ಪ್ರಗತಿ ಸಾಧಿಸಿದ ಬಗ್ಗೆ ವಿಷಯ ಮಂಡಿಸಿದರು.


ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಗಳು, ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪ್ರಧಾನ ಕಾರ್ಯಾರ್ಶಿಗಳು, ನವ ದೆಹಲಿಯ ನೀತಿ ಆಯೋಗದ ಉಪಾಧ್ಯಕ್ಷರು, ನೀತಿ ಆಯೋಗದ ಸಿಇಓ, 600ಕ್ಕೂ ಹೆಚ್ಚು ಜನ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಉತ್ತರಖಾಂಡದ ಮುಖ್ಯ ಕಾರ್ಯದರ್ಶಿ ಡಾ.ಎಸ್.ಎಸ್., ಮಧ್ಯೆಪ್ರದೇಶದ ಮುಖ್ಯ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ಬಿ., ಮಹಾರಾಷ್ಟçದ ಮುಖ್ಯ ಕಾರ್ಯದರ್ಶಿ ಮನು ಕುಮಾರ ಶ್ರೀವಾಸ್ತವ, ತೆಲಂಗಾಣ ಮುಖ್ಯ ಕಾರ್ಯದರ್ಶಿ ಸೋಮೇಶಕುಮಾರ, ತಮಿಳುನಾಡು ಮುಖ್ಯ ಕಾರ್ಯದರ್ಶಿ ಡಾ.ವಿ.ಈರೈ ಅಣುಬು, ಗುಜರಾತನ ಯೋಜನಾ ವಿಭಾಗದ ಕಾರ್ಯದರ್ಶಿ ರಾಖೇಶ ಶಂಕರ, ಪುಣೆ ಜಿಲ್ಲಾಧಿಕಾರಿ ಡಾ.ರಾಜೇಶ ದೇಶಮುಖ, ಇರೋಡ ಜಿಲ್ಲಾಧಿಕಾರಿ ತೀರು ಎಚ್ ಕೃಷ್ಣಂನುನಿ, ರಾಜಕೋಟ ಜಿಲ್ಲಾಧಿಕಾರಿ ಅರುಣ್ ಮಹೇಶ ಬಾಬು ಎಂ.ಎಸ್., ಚಮೋಳಿ ಜಿಲ್ಲಾಧಿಕಾರಿ ಹಿಮಾಂಶು ಖುರಾಣಾ, ನರ್ಮದಾಪುರ ಜಿಲ್ಲಾಧಿಕಾರಿ ನೀರಜ್ ಕುಮಾರ ಸಿಂಗ್, ಕರಿಮನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗರೀಮಾ ಅಗರವಾಲ್, ಮಹಾರಾಷ್ಟ್ರದ ಕೃಷಿ ನಿರ್ದೇಶಕಿ ಪ್ರೀತಿ ಮೈಥಿಲ್ ನಾಯಕ ಹಾಗೂ ಇನ್ನೀತರರು ಜಿಲ್ಲಾ ಉತ್ಪಾದನಾ ತಂತ್ರಗಳು, ಜಿಲ್ಲಾ ಕೃಷಿ ತಂತ್ರಗಳು, ಪ್ರವಾಸೋದ್ಯಮ ತಂತ್ರಗಳು ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

error: Content is protected !!