ಜಿಲ್ಲಾ ಪಂಚಾಯತ ಸಮಿತಿನ ಕೊಠಡಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಹುಲ್ ರತ್ನಂ ಪಾಂಡೆಯ ಜಿಲ್ಲಾ ಪಂಚಾಯತ ಕೊಪ್ಪಳ ರವರ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಶೌಚಾಲಯಗಳ ಬಳಕೆ ನಿರ್ವಹಣೆ, ವೈಯಕ್ತಿಕ ಶೌಚಾಲಯಗಳುನ್ನು ಹೊಂದದೆ ಇರುವ ಕುಟುಂಬಗಳ ಸರ್ವೆ, ಬೂದು ನೀರು ಕಾಮಗಾರಿ, ಘನ ತ್ಯಾಜ್ಯ ವಿಲೇವಾರಿ, ಘಟಕದಲ್ಲಿ ಕೆಲಸ ನಿರ್ವಹಿಸುವ ಸ್ವಚ್ಛತಾ ಗಾರರಿಗೆ ಸುರಕ್ಷ ಪರಿಕರಗಳನ್ನು ಒದಗಿಸುವುದು.
ಉದ್ಯೋಗ ಖಾತ್ರಿ ಯೋಜನೆ, ಮತ್ತು ಇ-ಹಾಜರಾತಿ, ಜಲದೂತ್ ಆ್ಯಪ್, ಶಾಲೆಗಳಿಗೆ ಬಣ್ಣ ಬಳಿಸುವುದು, ಇ-ಸ್ವತು, ಆಧಾರ ಸಿಡಿಂಗ್, ಬೋರವೇಲ್ ರೀಚಾರಜ್ ಪಿಟ್ ಅಳವಡಿಸುವುದು ಹಸಿರು ಸರೋವರ ನಿರ್ಮಿಸಲು ಸ್ಥಳ ಗುರುತಿಸುವುದಕ್ಕೆ ಸಂಬಂಧಿಸಿದಂತೆ ನಿಗಧಿತ ಅವಧಿಯಲ್ಲಿ ಪ್ರಗತಿ ಸಾಧಿಸಲು ಮಾನ್ಯರು ಸೂಚಿಸಿದರು.

ನಂತರ ಜಲ ಜೀವನ್ ಮಿಷನ್ ಯೋಜನೆ ಕುರಿತು ಎಲ್ಲಾ ಗ್ರಾಮಗಳಲ್ಲಿ ನೀರಿನ ಮೂಲಗಳ ಕುರಿತು ಮಾಹಿತಿ ಸಂಗ್ರಹಣೆ ಮಾಡುವುದು, FTK ಕಿಟ್ಟ ಕ್ರೀಯಾ ಯೋಜನೆ ಸಿದ್ದಪಡಿಸಬೇಕು. ನೀರಗಂಟಿ ಹಾಗೂ ಪ್ರತಿ ಗ್ರಾಮಗಳಲ್ಲಿ 5 ಜನ ಮಹಿಳಾ ಸದಸ್ಯರಿಗೆ FTK ಕಿಟ್ ಬಗ್ಗೆ ತರಬೇತಿಯನ್ನು ನೀಡುವುದು. ICE ಚಟುವಟಿಕೆ ಮೂಲಕ ಶುದ್ದ ಕುಡಿಯುವ ನೀರು ಹಾಗೂ ಶೌಚಾಲಯ ಬಳಕೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಸದರಿ ಸಭೆಯಲ್ಲಿ ಯೋಜನಾ ನಿರ್ದೇಶಕರು ಜಿ.ಪಂ ಕೊಪ್ಪಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ EE, ಸಹಾಯಕ ಕಾರ್ಯದರ್ಶಿಗಳು ಜಿ.ಪಂ ಕೊಪ್ಪಳ, ಎಲ್ಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, SBM-G ಸಮಾಲೋಚಕರು, ಸಿಬ್ಬಂದಿಗಳು ಹಾಜರಿದ್ದರು.

error: Content is protected !!