ಗಂಗಾವತಿ : ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸತ್ಯನಾರಾಯಣ ಪೇಟೆಯ ಮನೆಯೊಂದರಲ್ಲಿ ಬುಧವಾರ ಕಳ್ಳತನ ನಡೆದಿದ್ದು ಸುಮಾರು  7  ಗಂಟೆಯಲ್ಲಿ  ಬಂಧಿಸಿದ್ದಾರೆ.

ಸತ್ಯನಾರಾಯಣ ಪೇಟೆಯಲ್ಲಿರುವ ವಹೇದ್ ಶೇಖ ,ಎನ್ನುವರು ನಿವಾಸದಲ್ಲಿ ಸುಮಾರು 5 ಲಕ್ಷ ಬೆಲೆ ಬಾಳುವ 10‌ತೊಲೆ ಚಿನ್ನ ಕದ್ದಿದ್ದಾರು,ಈ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲೆಗಿತ್ತು,7 ಗಂಟೆಯಲ್ಲಿ ಪೊಲೀಸರು ತನಿಖೆ ಕೈಗೊಂಡು ಫರಹಬಾನು ಹುಸೇನ್ ಸಾಬ ಇಸ್ಲಾಂಪೂರು ಮತ್ತು ಟಿಪ್ಪುಸುಲ್ತಾನ ಮೌಲಾಸಾಬ ಮಾನ್ವಿ ಇವರನ್ನು ಪೊಲೀಸರು ಬಂಧಿಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಮಾರ್ಗದರ್ಶನದಲ್ಲಿ ಗಂಗಾವತಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಇವರ ಸಹಕಾರದೊಂದಿಗೆ ಗಂಗಾವತಿ ನಗರ ಪೊಲೀಸ್ ಠಾಣೆಯ ಪಿಐ ಎ.ಎಸ್.ಗುದಿಗೊಪ್ಪ ಇವರ ನೇತೃತ್ವದಲ್ಲಿ  ವಿಶ್ವನಾಥ, ಚಿರಂಜೀವಿ, ಮರಿಶಾಂತಗೌಡ,ಸುಭಾಷ್, ರಾಘವೇಂದ್ರ, ಮೈಲಾರಪ್ಪ,ಪರಸಪ್ಪ, ಹಾಗೂ ವಾಹನ ಚಾಲಕ ಶಿವಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

error: Content is protected !!