ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕಡಿಮೆ ಮಾಡಿದ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ, ಬಾಕಿ ವೇತನ ಮತ್ತು ಸೇವಾ ಭದ್ರತೆಗಾಗಿ ಬೃಹತ್ ಪ್ರತಿಭಟನೆ
ಗಂಗಾವತಿ :ಕರ್ನಾಟಕ ರಾಜ್ಯ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು, ಕೊಪ್ಪಳ ಜಿಲ್ಲಾ ಸಮಿತಿಯು ತಮಗೆ ಮನವಿ ಸಲ್ಲಸುವದೇನೆಂದರೆ, ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಡಿಯಲ್ಲಿ ಬರುವ ವಸತಿ ನಿಲಯ ಹಾಗೂ ವಸತಿ ಶಾಲೆಗಳು ಹೊರಗುತ್ತಿಗೆ ಆಧಾರದಲ್ಲ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕಳೆದ 15 -20 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಡುಗೆಯವರು,ಅಡುಗೆ ಸಹಾಯಕರು,ಕಾವಲುಗಾರರು, ಸ್ವಚ್ಛತಾಗಾರರು, ಜವಾನರು, ನರ್ಸಗಳು ಡಿ ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ.

ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಮತ್ತು ಅನೇಕ ಸಿಬ್ಬಂದಿಗಳಿಗೆ ವೇತನ ಮಾಡಿರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ 11 ತಿಂಗಳು ಕೆಲಸ ಮಾಡಿದ ಒಬ್ಬ ಸಿಬ್ಬಂದಿಗೆ ಸಂಬಳ ಹಾಕಿಲ್ಲ ವಿವಿಧ ಇಲಾಖೆಗಳಾದ ಬಿ.ಸಿ ಎಂ ಮತು ಅಲ್ಪ ಸಂಖ್ಯಾತರ ಇಲಾಖೆಯಲ್ಲಿ 3 ತಿಂಗಳು ಬಾಕಿ ವೇತನ ಇದೆ. ವಸತಿ ಶಾಲೆಯ ಸಿ ಗ್ರೂಪ್ ನ ಪ್ರಥಮ ದರ್ಜೆ ಸಹಾಯಕರಿಗೆ ಡಿ ಗ್ರೂಪ್ ಗಿಂತ ವೇತನ ಕಡಿಮೆಯಾಗಿದೆ ಹಾಗೂ ಹಾಸ್ಟೆಲ್‌ನಲ್ಲಿ ವಾರ್ಡನ್ ಗಳು ಕೇಳಬೇಕು. ಇಲ್ಲವಾದಲ್ಲ ಕೆಲಸದಿಂದ ತೆಗೆದು ಹಾಕುವ ಹುನ್ನಾರ ನಡೆಸುತ್ತಾರೆ. ಈಗಾಗಲೇ 2023-24 ಶೈಕ್ಷಣಿಕ ವರ್ಷ ಆರಂಭ ವಾಗಿದ್ದು, ವಿದ್ಯಾರ್ಥಿಗಳಿದ್ದರು. ಕೆಲಸಕ್ಕೆ ತಗೆದುಕೊಳ್ಳಲು ಮೀನಾಮೇಷ ಮಾಡುತ್ತಿದ್ದಾರೆ.
ಹಾಗಾಗಿ ಈ ಕೆಳಗಿನ ನಮ್ಮ ಬೇಡಿಕೆಗಳನ್ನು ಈಡೇಸಬೇಕೆಂದು ತಮ್ಮ ಪ್ರತಿಭಟನಾ ಮೂಲಕ ಒತ್ತಾಯಿಸುತ್ತಿದ್ದೇವೆ.
ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಇಂದು ನಗರಸಭೆ ಕಾರ್ಯಾಲಯ ಮುಂಭಾಗ ಮಾನ್ಯ ಶಾಸಕರಿಗೆ ಮನವಿ ಪತ್ರವನ್ನು ನೀಡಿ ಸಿಬ್ಬಂದಿಗಳಿಗೆ ಇರುವ ಹಲವು ಸಮಸ್ಯೆಗಳನ್ನು ಈಡೇರಿಸಲು ಮನವಿ ಮಾಡಿದರು ಮಾನ್ಯ ಶಾಸಕರ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಯಿತು..


ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕರಾರು ಒತ್ತಾಯಿಸಿದರು ಆದರೆ ಕೆಲವು ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದರು ಕೆಲವು
ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಮಾತ್ರ ಕಳಿಸಿದರು.
ಬೇಡಿಕೆಗಳು
1. ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ನೌಕರರಿಗೆ ನಿವೃತ್ತಿಯವರೆಗೂ ಸೇವಾ ಭದ್ರತೆ ನೀಡಬೇಕು .
2, ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ ಸಿಬ್ಬಂದಿ ಕಡಿಮೆ ಮಾಡಿರುವ ಆದೇಶವನ್ನು ವಾಪಸ್ಸು ತೆಗೆದುಕೊಳ್ಳಬೇಕು.
3, ಏಪ್ರಿಲ್ 2023ರಿಂದ ಜಾರಿಗೆ ಬಂದಂತಹ ಕನಿಷ್ಠ ಕಾಯ್ದೆ ವೇತನವನ್ನು ಕ್ರಾಸ್ ವಸತಿ ಶಾಲೆಗಳ ಸಿಬ್ಬಂದಿಗಳಿಗೂ ಅನ್ವಯವಾಗುವಂತೆ ಆದೇಶಿಸಬೇಕು.
4.ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಪ್ರ.ದ.ಸ ಹಾಗೂ ಸ್ಟಾಫ್ ನರ್ಸ್ ಗೆ ವೇತನ ಹೆಚ್ಚಿಸಬೇಕು.
5. ಗಂಗಾವತಿಯ ಸಮಾಜ ಕಲ್ಯಾಣ ಇಲಾಖೆ ಸಾಯಿ ನಗರ ಹಾಸ್ಟೆಲ್ ನಲ್ಲಿ ಸುಮಾರು 11 ತಿಂಗಳು ಕೆಲಸ ಮಾಡಿದ್ದು ವೇತನ ಮಾಡಿರುವುದಿಲ್ಲ.ಕೂಡಲೇ ವೇತನ ಕೊಡಬೇಕು.
6. ಕಾನೂನಿನ ಪ್ರಕಾರ ವಾರದ ರಜೆ ಕಡ್ಡಾಯವಾಗಿ ನೀಡಬೇಕು. ,

7.2017-18ನೇ ಸಾಲನಲ್ಲ ಮಂಜೂರಾದ ವಸತಿ ಶಾಲೆಗಳ ಹೊರ ಸಂಪನ್ಮೂಲ ಸಿಬ್ಬಂದಿಗಳ ಸಂಖ್ಯೆಯನ್ನು, 7 ರಿಂದ 119 -ಹೆಚ್ಚಿಸಬೇಕು.
8. ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಸಿಬ್ಬಂದಿಗಳ ಸಂಖ್ಯೆಯನ್ನು
9. ಅ.ಸಿ.ಎಂ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗಳ ಬಾಕಿ ವೇತನ ನೀಡಬೇಕು
10, ಪರಿಶಿಷ್ಟ ಜಾತಿಯ ವಸತಿ ನಿಲಯಗಳಲ್ಲಿ ರಾತ್ರಿ ಕಾವಲುಗಾರ ಹುದ್ದೆ ಇರುವಂತೆ ಉಳಿದ ಇಲಾಖೆಗಳಗೂ ರಾತ್ರಿ ಕಾವಲುಗಾರರ ಎಲ್ಲೆಗಳನ್ನು ಗಬೇಕು.
11. ಎಲ್ಲಾ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಬೇಕು.
12. ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು.ವಿದ್ಯಾರ್ಥಿಗಳ ನೆಪ ಹೇಳಬಾರದು.
13. ಉತ್ತರ ಕರ್ನಾಟಕ &ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಜೋಳದ ರೊಟ್ಟ ಮೆನು ಚಾರ್ಟನಲ್ಲಿರುವುದರಿಂದ ಯಂತ್ರಗಳಂದ ರೊಟ್ಟಿ ಮಾಡಲು ಬರುವುದಿಲ್ಲಾ ಹೆಚ್ಚುವರಿಯಾಗಿ ಹಾಸ್ಟೇಲ್ ಗೆ ಒಂದು ಸಿಬ್ಬಂದಿಯನ್ನು ತೆಗೆದುಕೊಳ್ಳಬೇಕು.
14. ಕಾರ್ಮಿಕ ಇಲಾಖೆಯ ಪ್ರಕಾರ 8 ಗಂಟೆ ಕೆಲಸ ತೆದುಕೊಳ್ಳಬೇಕು ಆದರೆ ಹಾಸ್ಟೇಲ್ ನಲ್ಲ ಅದಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದು ಹೆಚ್ಚುವರಿಯಾಗಿ (ಓ.ಟಿ) ಆದರದ ವೇತನ ನೀಡಬೇಕು.
15. ಸಮಾಜ ಕಲ್ಯಾಣ ಇಲಾಖೆಯ ಏಪ್ರೀಲ್ 2022 ರಿಂದ ಅಕ್ಟೋಬರ್ ವರೆಗೆ ಅರಿಯರ್ಸ ಮಾಡಬೇಕು.
16. ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯಾದ ಪಕೀರಪ್ಪ ನನ್ನು ಸೀನಿಯರಿಟ ಮೇಲೆ ತೆಗೆದುಕೊಳ್ಳಬೇಕು
ಈ ಸಂದರ್ಭದಲ್ಲಿ ಅಂಗಪ್ಪ ಹೆಚ್ ಮಹ್ಮದ್ ರಪೀಕ್ ಉಪಾಧ್ಯಕ್ಷರು ಶೇಖರಪ್ಪ ರೇವಣ್ಣ ಮಂಜುನಾಥ ಅಂಗಪ್ಪ ಜಮಾಪುರ ಗ್ಯಾನೇಶ ಕಡಗದ ಜಿಲ್ಲಾಧ್ಯಕ್ಷರು ಸೋಮನಾಥ ಹುಸೇನಪ್ಪ ಶೋಭಾ ನೂರಪಾಷ ಆನಂದ ಮರಿಯಮ್ಮ ತೊಂಡಪ್ಪ ಸೋಮನಾಥ ವಕೀರಪ್ಪ ಕಾರ್ಯದರ್ಶಿ ಮಹಿಬೂಬ ಕನಕಗಿರಿ ಹನುಮಂತ ಪಾರ್ವತಮ್ಮ