ಗಂಗಾವತಿ: ವಿದ್ಯುತ್ ದರ ಹೆಚ್ಚಳ ಮಾಡಿದ್ದನ್ನು ವಾಪಸ್ ಪಡೆಯುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ ಸಿ) ಗೆ ಸೂಚಿಸ ಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವ್ರದ್ದಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆ ನಾವು ಮಾಡಿಲ್ಲ ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳುವ ಸರ್ಕಾರ ಬಿಜೆಪಿ ಸರ್ಕಾರ ಮಾಡಿರುವ ಆದೇಶಗಳನ್ನು ಈ ಸರ್ಕಾರ ಒಪ್ಪಲು ಸಾದ್ಯವೇ? ಆದ್ದರಿಂದ ಇಂತಹ ಹೇಳಿಕೆ ನೀಡುವ ಬದಲಾಗಿ ಕೆಇಆರ್ ಸಿ ಗೆ ಸೂಚಿಸಬೇಕು. ಕೆಇಆರ್ ಸಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲೇ ಬರುತ್ತದೆ. ಹೀಗಿರುವಾಗ ನಿಗದಿ ಮಾಡಿದ ದರ ವಾಪಸ್ ಪಡೆಯುವಂತೆ ಸೂಚಿಸಿ ಬಡವರ ಪಾಲಿಗೆ ಜ್ಯೋತಿಯಾಗಬೇಕು. ಇಲ್ಲವಾದಲ್ಲಿ ೨೦೦ ಯೂನಿಟ್ ಉಚಿತ ನೀಡಿದ್ದು ವ್ಯರ್ಥವಾದಂತಾಗುತ್ತದೆ.

ದರ ಏರಿಕಯಿಂದ ಬಡ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಅವರೇ ದರದ ವಿರುದ್ದ ಧ್ವನಿ ಎತ್ತುತ್ತಿದ್ದಾರೆ. ಒಂದು ಕೈಯಿಂದ ಉಚಿತವಾಗಿ  ನೀಡಿ ಇನ್ನೊಂದು ಕೈಯಿಂದ ಹೆಚ್ಚು ಹಣ  ಕಿತ್ತುಕೊಳ್ಳುತ್ತಿದ್ದಾರೆಂದು ಅಪಾದನೆ ಮಾಡುತ್ತಿದ್ದಾರೆ.

ವ್ಯತಿರಿಕ್ತ ಪರಿಣಾಮ ಎದುರಿಸುವ ಬದಲು ,ವಾಪಸ್ ಪಡೆಯ ಬೇಕು ಮ್ಯಾಗಳಮನಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

error: Content is protected !!