ಬೆಂಗಳೂರು : ರಾಜ್ಯದ ಜನತೆಗೆ ವಿದ್ಯುತ್ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಬಿಸಿಲಿನ ತಾಪಮಾನ ಹೆಚ್ಚಳದ ಪರಿಣಾಮ ಮೊಟ್ಟೆ ದರದಲ್ಲಿ ಏರಿಕೆಯಾಗಿದೆ.

ತಾಪಮಾನ ಹೆಚ್ಚಳದಿಂದಾಗಿ ಕೋಳಿಗಳಿಗೆ ರೋಗ ಬಾಧೆಗಳು ಹೆಚ್ಚು, ಇದು ಮೊಟ್ಟೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು, ಮೊಟ್ಟೆ ದರದಲ್ಲಿ ಏರಿಕೆಯಾಗಿದೆ.

ಬೇಸಿಗೆಯಲ್ಲಿ ಕೋಳಿಗಳು ಹೆಚ್ಚಾಗಿ ನೀರು ಕುಡಿಯುತ್ತವೆ. ಇದರಿಂದ ಕೋಳಿಗಳಲ್ಲಿ ಪುಷ್ಟಿ ಕಡಿಮೆಯಾಗಿ ಮೊಟ್ಟೆ ಇಡುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಮೊಟ್ಟೆ ದರವು 50 ರಿಂದ 60 ಪೈಸೆ ಹೆಚ್ಚಾಗಿದೆ.

ಉತ್ಪಾದನೆ ಇಳಿಕೆ ಹಾಗೂ ಸಾರಿಗೆ ವೆಚ್ಚ ದುಬಾರಿಯಾದ ಪರಿಣಾಮ ಸಗಟು ದರದಲ್ಲಿ ಒಂದು ಮೊಟ್ಟೆ ಬೆಲೆ 5.65 ರೂ. ಇದ್ದು, ಚಿಲ್ಲರೆ ಮಾರಾಟಗಾರರು ಒಂದು ಮೊಟ್ಟೆಯನ್ನು 6.50 ರೂ.ನಂತೆ ಮಾರುತ್ತಿದ್ದಾರೆ.

error: Content is protected !!