ಗಂಗಾವತಿ : ಎರಡನೇ  ವರ್ಷದ  ಪಾದಯಾತ್ರೆಯನ್ನು ಹಿರೇಜಂತಕಲ್. ವಿರುಪಾಪುರ ಗಂಗಾವತಿ, ಆರ್ಯವೈಶ್ಯ ಸಮಾಜ ಬಾಂಧವರು,ಶನಿವಾರ ದಂದು ಪಾದಯಾತ್ರೆ ನೆರವೇರಿಸಿದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ ಅವರ ಮಾರ್ಗದರ್ಶನದಂತೆ ಮತ್ತು ಗುರುಗಳಾದ ಶ್ರೀ ಗುರು ಭೀಮ ಭಟ್ಟ ಆಚಾರ್ಯರ ಮುಖಾಂತರ  ಪಾದಯಾತ್ರೆಯನ್ನು ಬೆಳಗಿನ ಜಾವ ಸುಮಾರ 5:00 ಗಂಟೆ  ವೇಳೆಯಲ್ಲಿ  ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ಪೂಜೆಯನ್ನು ನೆರವೇರಿಸಿ ಪ್ರಾರಂಭ  ಮಾಡಲಾಯಿತು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ  ಮಂಡಳಿಯ ಮತ್ತು ಮಹಿಳಾ ಮಂಡಳಿಯ ಸರ್ವ ಸದಸ್ಯರು ಮತ್ತು ಸುತ್ತಮುತ್ತಲಿನ ಆರ್ಯವೈಶ್ಯ ಸಮಾಜದ ಮುಖಂಡರು ಭಾಗವಹಿಸಿದ್ದರು.

ಭಜನಾ ಮಂಡಳಿಯ  ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಟಿ. ಮತ್ತು ಬಳಗದಿಂದ ಪಾದಯಾತ್ರೆಯನ್ನು  ನೆರವೇರಿಸಲಾಯಿತು. ಪ್ರತಿ ವರ್ಷ ದಂತೆ ಈ ವರ್ಷವೂ  ಸಮಾಜದ ಬಾಂಧವರಿಂದ, ಧಾರ್ಮಿಕ ಕೇಂದ್ರಗಳಿಗೆ ಪಾದಯಾತ್ರೆಯನ್ನು ನಡೆಸುವುದರ ಮೂಲಕ, ಶ್ರದ್ಧೆ.ಭಕ್ತಿ.ಭಾವವನ್ನು ಮೂಡಿಸಲಾಗುತ್ತಿದೆ.

ಕಳೆದ ವರ್ಷ ದಂತೆ  ಈ ವರ್ಷವೂ ಸಹ  ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಅದೇ ರೀತಿಯಾಗಿ ಮಂತ್ರಾಲಯಕ್ಕೆ ಈ ವರ್ಷ ದಿನಾಂಕ : 24 /6/ 2023 ರಂದು ಎರಡನೇ ವರ್ಷದ  ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು  ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸುಮಾರು 200 ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಪಾದಯಾತ್ರೆಯ ದಾರಿ ಮಾರ್ಗದಲ್ಲಿ  ಲಘು ಉಪಹಾರವನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ದಮ್ಮೂರ್ ರಾಜಕುಮಾರ     ಎನ್ ಗಂಗಾಧರ. ಜಿ ಆರ್ ಎಸ್ ಸತ್ಯಣ್ಣ. ದರೋಜಿ ವೆಂಕಟೇಶ. ಚಂದ್ರು ಹಣವಾಳ. ದಮ್ಮೂರ್ ರವಿಕುಮಾರ. ಜನಾದ್ರಿ ನಿಂಗಪ್ಪ. ಚಿದಾನಂದ. ರಾಕೇಶ. ಮಾರುತಿ. ಮರಿಸ್ವಾಮಿ. ಚಂದ್ರು ಬನ್ನಿಗೋಳ.  ಸೇರಿದಂತೆ ಸಮಾಜದ ಗುರು ಹಿರಿಯರು ಮಹಿಳೆಯರು ಸೇರಿದಂತೆ  ಪಾದಯಾತ್ರೆಯನ್ನು  ಯಶಸ್ವಿಗೊಳಿಸಿ ನವ ಬೃಂದಾವನದಲ್ಲಿ  ಶ್ರೀ ಗುರುರಾಯರ ಕೃಪೆಗೆ ಪಾತ್ರರಾದರು ಬೃಂದಾವನದಲ್ಲಿ ವಿಶೇಷ ಪೂಜೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮಾವಳಿ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ ಅವರು  ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸಹ  ಪಾದಯಾತ್ರೆಯಲ್ಲಿ ಪಾಲ್ಗೊಂಡಂತ ವಿಶೇಷವಾಗಿ ಮಹಿಳಾ ಸಂಘದವರಿಗೂ ಆ ತಾಯಿ  ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ  ಆಶೀರ್ವಾದ ಸದಾಕಾಲ ಇರಲಿ ನಮ್ಮ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಪಾದಯಾತ್ರೆಗೂ ಅಮ್ಮನವರ  ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಕೇಳಿಕೊಂಡರು ನಂತರ ಮಾತನಾಡಿದ ಶ್ರೀ ಗುರು ಭೀಮ ಭಟ್ಟ ಆಚಾರ್ಯರು ಪಾದಯಾತ್ರೆಗೆ ಬಂದಂತ ಎಲ್ಲರಿಗೂ ಆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.

error: Content is protected !!