ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದ ( PSI Recruitment Scam ) ಮಾದರಿಯಲ್ಲೇ ನ್ಯಾಯಾಂಗ ಇಲಾಖೆಯ ಎಪಿಪಿ ಕಂ ಎಜಿಪಿ ನೇಮಕಾತಿಯಲ್ಲೂ ಅಕ್ರಮ ನಡೆದಿರುವುದಾಗಿ ಆರೋಪ ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಇಲಾಖಾ ತನಿಖೆಯನ್ನು ನಡೆಸಿ, 10 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಸಿಎಂ ಸಿದ್ಧರಾಮಯ್ಯ ( CM Siddaramaiah ) ಆದೇಶಿಸಿದ್ದಾರೆ.

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ದಿನಾಂಕ 23-07-2022 ಮತ್ತು ದಿನಾಂಕ 24-07-2022ರಂದು ನಡೆದ APP CUM AGP ( ಸಹಾಯಕ ಸರ್ಕಾರಿ ಅಭಿಯೋಜಕರು ಕಂ ಸಹಾಯಕ ಸರ್ಕಾರಿ ವಕೀಲರ) ನೇಮಕಾತಿ ಪರೀಕ್ಷೆಯಲ್ಲಿ ( Recruitment Exam ) ಭ್ರಷ್ಟಾಚಾರ ಅಕ್ರಮಗಳು ನಡೆದಿರುವುದಾಗಿ ವ್ಯಾಪಕವಾದ ದೂರುಗಳು ಸಲ್ಲಿಕೆಯಾಗಿರುತ್ತವೆ ಎಂದಿದ್ದಾರೆ.

ನ್ಯಾಯಾಂಗ ಇಲಾಖೆಯ ನೇಮಕಾತಿಯಲ್ಲಿ ನಡೆದಿರುವಂತ ಈ ಅಕ್ರಮದ ಬಗ್ಗೆ ಕೂಡಲೇ ನಿರ್ದಾಕ್ಷಿಣ್ಯವಾದ ಇಲಾಖಾ ತನಿಖೆ ನಡೆಸಿ, ತಪ್ಪಿತಸ್ಥರ ವಿವರಗಳೊಂದಿಗೆ 10 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

error: Content is protected !!