ಕೋಪ್ಪಳ‌ ಜೂ 06: ಜಲಾಶಯ ಕೆಳಭಾಗದ ಹೊಳೆ ಮದ್ಲಾಪುರದಿಂದ ಕಂಪ್ಲಿಯವರೆಗಿನ ಪ್ರದೇಶವನ್ನು ಅಪರೂಪದ ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಸರಕಾರ ಘೋಷಿಸಿದೆ. ಆದರೆ ನೀರು ನಾಯಿಗಳಿಗೆ ಈಗ ಆಪತ್ತು ಬಂದಿದೆ. ನದಿಯಲ್ಲಿಯ ನೀರು ಕಲುಷಿತ, ಮೀನು ಬೇಟೆಗಾರರಿಂದಾಗಿ ಅಪರೂಪದ ಜೀವಿ ನೀರು ನಾಯಿಗಳಿಗೆ ಕುತ್ತು ಬಂದಿದೆ.

ಕೊಪ್ಪಳ ಜಿಲ್ಲೆಯ ಒಂದು ದಡ ಹಾಗು ವಿಜಯನಗರ ಹಾಗು ಬಳ್ಳಾರಿ ಜಿಲ್ಲೆಯ ಇನ್ನೊಂದು ದಡದ ಮಧ್ಯೆದ ನದಿ ಪಾತ್ರದಲ್ಲಿ ವಾಸಿಸುವ ಅಪರೂಪದ ಜೀವಿಗಳು ಹೆಚ್ಚಾಗಿ ವಾಸಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ತುಂಗಭದ್ರಾ ನದಿಯು ಮಲೀನವಾಗುತ್ತಿದೆ. ನದಿಗೆ ಪ್ಲಾಸ್ಟಿಕ್, ಬಟ್ಟೆ , ಇನ್ನಿತರ ವಸ್ತುಗಳನ್ನು ಜನರು ಹಾಕುತ್ತಿದ್ದಾರೆ. ಅದರಲ್ಲಿಯೂ ಪ್ರಸಿದ್ದ ದೇವಸ್ಥಾನಗಳಾದ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನ. ಹಂಪಿ ವಿರುಪಾಕ್ಷ ದೇವಸ್ಥಾನ, ಪುರಂದರ ಮಂಟಪ ಸೇರಿದಂತೆ ದೇವಸ್ಥಾನಕ್ಕೆ ಬರುವ ಭಕ್ತರು ಕಸ ಕಡ್ಡಿ, ಬಟ್ಟೆಗಳನ್ನು ಎಸೆಯುತ್ತಿದ್ದಾರೆ. ಅಲ್ಲದೆ ವಿಜಯನಗರ ಜಿಲ್ಲೆಯ ಗಣಿಗಾರಿಕೆ. ನದಿ ಪಾತ್ರದ‌ ಜಮೀನುಗಳಿಗೆ ಅಧಿಕ ಪ್ರಮಾಣದ ರಸಗೊಬ್ಬರ ಹಾಗು ಕ್ರಿಮಿನಾಶಕ ಬಳಕೆಯಿಂದಾಗಿ ನದಿಯ ನೀರು ಕಲುಷಿತಗೊಂಡಿದೆ ಇದರಿಂದಾಗಿ ತುಂಗಭದ್ರಾ ನದಿಯಲ್ಲಿರುವ ಅಪಾರ ಪ್ರಮಾಣದ ನೀರು ನಾಯಿಗಳು ಸಾವನ್ನಪ್ಪುತ್ತಿವೆ.

ಅನುಪಯುಕ್ತ ವಸ್ತುಗಳಿಂದ ನೀರುನಾಯಿಗಳ ಜೀವಕ್ಕೆ ಕುತ್ತು ಬರುತ್ತಿರುವ ಹಿನ್ನೆಲೆಯಲ್ಲಿ ನೀರುನಾಯಿಗಳನ್ನು ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.ಜಿಲ್ಲಾ ಅರಣ್ಯ ಅಧಿಕಾರಿ ಕಾವ್ಯ ಚರ್ತುವೇದಿಯಿಂದ ಅಭಿಯಾನ ಆರಂಭಿಸಿದ್ದಾರೆ.ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ನದಿ ಸ್ವಚ್ಚತೆ ಮಾಡುತ್ತಿದ್ದಾರೆ.

34 ಕಿಲೋಮಿಟರ ನದಿ ಸಂರಕ್ಷಣಾ ಪ್ರದೇಶದಲ್ಲಿ ನೂರಾರು ನೀರು ನಾಯಿಗಳ ವಾಸವಾಗಿವೆ ಎಂಬ ಅಂದಾಜಿದೆ.ನದಿ ಅಪವಿತ್ರತೆಯಿಂದ ನೀರು ನಾಯಿ ಸಂತತಿ ನಾಶವಾಗುವ ಆತಂಕ ಉಂಟಾಗಿದೆ. ಮೇ 31 ನೀರು ನಾಯಿ ದಿನ ಅಂದಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ನದಿ ಸ್ವಚ್ಛತೆ ಮಾಡಿ ನೀರು ನಾಯಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.

error: Content is protected !!