ಬೆಂಗಳೂರು : ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಜಾರಿಯಾಗಲಿದ್ದು, ಎಲ್ಲಾ ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆ ಬಳಿಕ ಹೇಳಿದ್ದಾರೆ.

ಸಾರಿಗೆ ಸಚಿವರ ಸಭೆಯಲ್ಲಿ ಫ್ರೀ ಬಸ್​ ಗ್ಯಾರಂಟಿ ರಿಪೋರ್ಟ್​ ರೆಡಿಯಾಗಿದ್ದು, ಸಾರಿಗೆ ಸಚಿವರು ಸಿಎಂಗೆ ಇಂದೇ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಉಚಿತ ಪ್ರಯಾಣದ ಭರವಸೆ ನೀಡಿದ್ದೇವೆ, ಈಡೇರಿಸುತ್ತೇವೆ, ರಾಜ್ಯದ ಎಲ್ಲಾ ಮಹಿಳೆಯರಿಗೂ ಇದು ಅನ್ವಯ ಆಗುತ್ತೆ ಎಂದು ಸಾರಿಗೆ ನಿಗಮಗಳ ಮುಖ್ಯಸ್ಥರ ಜತೆ ರಾಮಲಿಂಗಾರೆಡ್ಡಿ ಸಭೆ ನಡೆಸಿದ್ದಾರೆ. ಸಭೆ ನಂತರ ಫ್ರೀ ಬಸ್ ಗ್ಯಾರೆಂಟಿ ಬಗ್ಗೆ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ಧಾರೆ.

ಪ್ರತಿ ವರ್ಷ ಅಂದಾಜು 3200 ಕೋಟಿ ಖರ್ಚು ಬೇಕಾಗುತ್ತದೆ, ಸರ್ಕಾರ ಯಾವ ರೀತಿ ಈ ಮೊತ್ತ ಭರಿಸಬಹುದು ಎಂಬ ಚರ್ಚೆ ನಡೆಸಲಾಗಿದೆ. KSRTC ಹೆಚ್ಚುವರಿ ಎಂಡಿ ಹಾಗೂ ಬಿಎಂಟಿಸಿ ಎಂಡಿ ಸತ್ಯವತಿ , ಮತ್ತು NWKRTC ಎಂಡಿ ಭರತ್ , KKRTC ಎಂಡಿ ರಾಚಪ್ಪ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

error: Content is protected !!