ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಜೊತೆ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದ ಜನ ಮತ್ತೆ ನರೇಗಾ ಕೆಲಸ, ಕಾರ್ಯಗಳಿಗೆ ಮರಳಿದ್ದಾರೆ

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣಾ(Karnataka Assembly Elections 2023) ಕಾವು ಜೋರಾಗಿ ಮಳೆ ಬಂದು ನಿಂತಂತಾಗಿದೆ.

ಅಭ್ಯರ್ಥಿಗಳ ಜೊತೆ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದ ಜನ ಮತ್ತೆ ಕೆಲಸ, ಕಾರ್ಯಗಳಿಗೆ ಮರಳಿದ್ದಾರೆ. ನರೇಗಾ (nrega) ಕಾಮಗಾರಿಗೂ ಸಖತ್ ಡಿಮ್ಯಾಂಡ್ ಬಂದಿದೆ. ಹೌದು..ನರೇಗಾ ಅಂದ್ರೆ ಗ್ರಾಮೀಣ ಭಾಗದ ಜನರ ಜೀವನಾಧಾರವಾಗಿದೆ. ಜಮೀನುಗಳಲ್ಲಿ ಕೆಲಸ ಇಲ್ಲದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಎಲೆಕ್ಷನ್ ಸಂದರ್ಭದಲ್ಲಿ ನರೇಗಾ ಕಾಮಗಾರಿಗೆ ಡಿಮ್ಯಾಂಡ್ ಕಡಿಮೆಯಾಗಿ ಕಾರ್ಮಿಕರೇ ಸಿಗುವುದು ಕಷ್ಟವಾಗಿತ್ತು. ಕೆಲವು ಕಡೆ ಕಾಮಗಾರಿಗಳೇ ನಿಂತು ಹೋಗಿದ್ವು. ಆದ್ರೆ ಇದೀಗ ಎಲೆಕ್ಷನ್ ಫೀವರ್ ಇಳಿಯುತಿದ್ದಂತೆ ಕಾರ್ಮಿಕರು ಕೆಲಸ, ಕಾರ್ಯಗಳಿಗೆ ವಾಪಸ್ ಆಗಿದ್ದಾರೆ.

ಬೆಳಗಾವಿಯಲ್ಲಿ ಕೆಲಸ ಸಿಗದೆ ಖಾಲಿ ಇದ್ದ ಜನರಿಗೆ ಇದೀಗ ಮತ್ತೆ ನರೇಗಾನೇ ಜೀವನಾಧಾರವಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ 80 ಸಾವಿರದವರೆಗೆ ಇದ್ದ ಕಾರ್ಮಿಕರ ಸಂಖ್ಯೆ ಈಗ ದುಪ್ಪಟ್ಟಾಗಿದೆ. ಪ್ರತಿ ದಿನ 1ಲಕ್ಷ 30ಸಾವಿರದಿಂದ – 1ಲಕ್ಷ 50 ಸಾವಿರ ಕಾರ್ಮಿಕರು ಕೆಲಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲೇ ಅತೀ ಹೆಚ್ಚು ಕಾರ್ಮಿಕರಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಬೆಳಗಾವಿ ಪಾತ್ರವಾಗಿದೆ.

ಇನ್ನೂ ರಾಜ್ಯದಲ್ಲೇ ಅತೀ ಹೆಚ್ಚು ನರೇಗಾ ಕಾಮಗಾರಿಯಲ್ಲಿ ಜನರಿಗೆ ಕೆಲಸ ಕೊಡುವ ಜಿಲ್ಲೆ ಬೆಳಗಾವಿ. ಜಿಲ್ಲೆಯಲ್ಲಿ 5ಲಕ್ಷ ಜನರಿಗೆ ಕೆಲಸ ಕೊಡಲಾಗಿದೆ. ಜೂನ್ ತಿಂಗಳಲ್ಲಿ ಮಳೆ ಆರಂಭ ಆಗುವವರೆಗೂ ಕೆಲಸ ಮಾಡಿಸುವುದಾಗಿ ಸಿಇಒ ಹೇಳಿದ್ದಾರೆ.

ಒಟ್ಟಾರೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಜತೆಗೆ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದವರು ಇದೀಗ ನರೇಗಾ ಕೆಲಸದತ್ತ ಮುಖ ಮಾಡಿದ್ದಾರೆ.

error: Content is protected !!