ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಗೋವುಗಳು ಮಾರಣ ಹೋಮ ನಡೆದಿದೆ ಗೋವು ಮತ್ತಿತರ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಮಾಹಿತಿಯನ್ನು ಬೇಧಿಸಿರುವ ಪೊಲೀಸರು ಪ್ರಕರಣ ದಾಳಿ ಮಾಡಿ ನಾಲ್ವರು ಗೋ ಹಂತಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ಸಾರ್ವಜನಿಕ ಮಾಹಿತಿ ಮೆರೆಗೆ ಕಾರಟಗಿ ಪೊಲೀಸ್ ಠಾಣ ಸಿದ್ಧರಾಮಯ್ಯ ಅವರು ದಾಳಿ – ಮಾಡಿದ್ದಾರೆ. ತಾಲೂಕಿನ ಪಿಐ ಸಿದ್ಧಾಪುರ ಗ್ರಾಮದ ಆರೋಪಿತರ ಮನೆಯಲ್ಲಿ ಆಕಳು ಮತ್ತು ಎಮ್ಮೆಗಳನ್ನು ಹತ್ಯೆ ಮಾಡಿ ಮಾಂಸ . ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಆಕಳು ಮತ್ತು ಎಮ್ಮೆಯ ಮಾಂಸ ಮತ್ತು ವಿವಿಧ ಸಾಮಗ್ರಿಗಳು ದೊರೆತಿವೆ. ಜೊತೆಗೆ ಎರಡು ಆಕಳು ಮತ್ತು ಎರಡು ಎಮ್ಮೆಳನ್ನು ವಶ ಪಡೆಸಿಕೊಂಡಿದ್ದಾರೆ. ನಂತರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಅಡಿ ಸಿದ್ಧಾಪುರ ಗ್ರಾಮದ ಕರಿಂಸಾಬ್‌ ಮೆಹಬೂಬ್‌ ಸಾಬ್‌, ಬಂದಾಜ ಮೆಹಬೂಬ್‌ ಸಾಬ್, ನಬೀಸಾಬ್ ಮತ್ತು ವಲಿಸಾಬ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರು ಪರಾರಿಯಾಗಿದ್ದಾರೆ ಎಂದು ಪ್ರಕರಣದಲ್ಲಿ ದಾಖಲಿಸಲಾಗಿದೆ.

ಚುನಾವಣೆ ಮುಗಿದ ನಾಲ್ಕು ದಿನದಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ತ೦ಗಡಗಿ ಶಾಸಕರಾಗುತ್ತಿದ್ದಂತೆ ಗೋ ಹಂತಕರಿಗೆ ದಾರಿ ಸುಗಮವಾಗಿದೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ಕಾನೂನಿಗೆ ಹೆದರಿದ್ದ ಗೋ ಹಂತಕರು ಈಗ ಬಹಿರಂಗವಾಗಿ ಗೋವುಗಳ ಮಾರಣ ಹೋಮ ನಡೆಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!