
ಗಂಗಾವತಿ :ಕರ್ನಾಟಕದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವಂತಹ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಡಾಕ್ಟರ್ ಜಿ ಪರಮೇಶ್ವರ್ ಅಭಿಮಾನಿ ಕೊಪ್ಪಳ ಜಿಲ್ಲಾಧ್ಯಕ್ಷ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಶಿವಕುಮಾರ್ ಚಲವಾದಿ ಕೇಂದ್ರ ಎಐಸಿಸಿ ಅಧ್ಯಕ್ಷರಿಗೆ ಪತ್ರಿಕೆ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ

ಡಾಕ್ಟರ್ ಜಿ ಪರಮೇಶ್ವರ್ ಅವರು ಅನೇಕ ಬಾರಿ ಶಾಸಕರಾಗಿ ಮತ್ತು ಅನೇಕ ಬಾರಿ ಸಚಿವರಾಗಿ ಒಂದು ಬಾರಿ ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದಿಂದ ಸೇವೆ ಸಲ್ಲಿಸಿದಂತಹ ಮಹಾನ್ ಜನನಾಯಕ ಮತ್ತು ವಿವಿಧ ಸಮುದಾಯಗಳ ಜನರ ಉತ್ತಮ ಸ್ನೇಹ ಬಾಂಧವ್ಯವುಳ್ಳಂತವರು ಮತ್ತು ಸಚಿವರಾದ ಸಂದರ್ಭದಲ್ಲಿ ಎಲ್ಲಾ ಖಾತೆಯನ್ನು ನಿರ್ವಹಿಸಿದಂತಹ ಅನುಭವ ಉಳ್ಳಂತವರು ಡಾಕ್ಟರ್ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷಗೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸಿದಂತವರು 2013ರಲ್ಲಿ ಕೆಪಿಸಿಸಿ ಅಧ್ಯಕ್ಷರ ಅವಧಿಯಲ್ಲಿ ಎಲ್ಲಾ ಸಮುದಾಯದ ಶಾಸಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಜಿಲ್ಲೆಗೆ ಹೋಗಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿದಂತಹ ಮಹಾನ್ ವ್ಯಕ್ತಿ ಇವರು ಅಧ್ಯಕ್ಷ ಸ್ಥಾನದಲ್ಲಿದ್ದಾಗ ಕರ್ನಾಟಕ ಸರ್ಕಾರದಲ್ಲಿ ಅತಿ ಹೆಚ್ಚು ಬಹುಮತ ಗಳಿಸಿದಂತಹ ಪಕ್ಷಕ್ಕೆ ಈಗಲೂ ಕೂಡ ತಮ್ಮ ಕಾಯಕ ನಿಷ್ಠೆಯಲ್ಲಿ ಪ್ರಾಮಾಣಿಕತೆಯಿಂದ ಜನರ ಸೇವೆ ಜನರೊಂದಿಗೆ ಬೆರೆತು ಜನರ ಕಷ್ಟಗಳನ್ನು ಅರಿತು ಅವರ ಜನರಮಧ್ಯೆ ಬದುಕುವಂತಹ ಜನನಾಯಕ ಡಾಕ್ಟರ್ ಜಿ ಪರಮೇಶ್ವರ್ ಮತ್ತು ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವರು. ಪಕ್ಷವನ್ನು ಬಲವರ್ಧನೆ ಪಡಿಸುವಲ್ಲಿ ಪಕ್ಷದ ವರಿಷ್ಠರು ಹೇಳಿದ ಜವಾಬ್ದಾರಿ ನಿಭಾಯಿಸಿದಂತವರು ಮತ್ತು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮೇಲ್ಮಟ್ಟಕ್ಕೆ ಕಟ್ಟಿ ಬೆಳೆಸಿದಂತ ನಾಯಕ 2023ರ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಳ್ಳಬೇಕಾದರೆ ಅದರಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಅವರ ಪಾತ್ರ ಬಹಳ ಮುಖ್ಯವಾಗಿದೆ ಜಿ ಪರಮೇಶ್ವರ್ ಅವರು 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಾ. ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲು ಎಲ್ಲಾ ಅರ್ಹತೆಗಳು ಇದ್ದವು ಆದರೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನ ಕೊಡದೆ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಪ್ರಸಂಗ ಬಂದಿತ್ತು ಆ ಒಂದು ಉದ್ದೇಶದಿಂದ ಡಾಕ್ಟರ್ ಜಿ ಪರಮೇಶ್ವರ್ ಅವರು ತಮ್ಮ ಸರ್ಕಾರ ಮುಂದೆ ಸಾಗಲಿ ಎಂಬ ಒಂದು ದೃಷ್ಟಿ ಇಟ್ಟುಕೊಂಡು ಅವರು ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಹಾಗಾಗಿ ಅವರಿಗೆ ಎಲ್ಲಾ ಅರ್ಹತೆಗಳು ಹೊಂದಿದ್ದಾರೆ ಹಾಗಾಗಿ ಡಾ ಜಿ ಪರಮೇಶ್ವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಎಐಸಿಸಿ ಅಧ್ಯಕ್ಷರಿಗೆ ಶಿವುಮಾರ್ ಚಲವಾದಿ ಪತ್ರಿಕೆ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ