ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023

ಕೊಪ್ಪಳ ಮೇ 13: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ.ಜನಾರ್ಧನರೆಡ್ಡಿ ಅವರು 8,266 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.


ಜಿ.ಜನಾರ್ಧನ ರೆಡ್ಡಿ ಅವರು ಒಟ್ಟು 66,213 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರು 57,947 ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ.

ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ 29,167 ಮತಗಳು, ಜೆಡಿಎಸ್‌ನ ಚನ್ನಕೇಶವ ಹೆಚ್ ರಾಮುಲು 1212, ಎಎಪಿಯ ಶರಣಪ್ಪ ಸಜ್ಜಿಹೊಲ 415, ಬಿ.ಎಸ್.ಪಿ.ಯ ಶಂಕರ ಸಿದ್ದಾಪುರ 190, ಕರ್ನಾಟ ರಾಷ್ಟç ಸಮಿತಿಯ ಕನಕಪ್ಪ ಹನುಮಂತಪ್ಪ ಹುಡೆಜಾಲಿ 391, ಇಂಡಿಯನ್ ಮುಮೆಂಟ್ ಪಾರ್ಟಿಯ ಕರಡಿ ಬಸವರಾಜ 477, ಅಖಿಲ ಭಾರತ ಹಿಂದೂ ಮಹಾಸಭಾದ ವಿಜಯಕುಮಾರ ಆಚಪ್ಪಾ 177, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ವೆಂಕಟೇಶರಾವ್ ಜಿ ಕುಲಕರ್ಣಿ 356, ಉತ್ತಮ ಪ್ರಜಾಕೀಯ ಪಾರ್ಟಿಯ ಶರಣಪ್ಪ ಸಿಂಗನಾಳ 371, ಹಿಂದೂಸ್ತಾನ ಜನತಾ ಪಾರ್ಟಿಯ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ 87, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಭಾರತದ ಸರಸ್ವತಿ ಕೆ 222, ಪಕ್ಷೇತರ ಅಭ್ಯರ್ಥಿಗಳಾದ ಚಕ್ರವರ್ತಿ ನಾಯಕ ಟಿ 273, ಮಹಮ್ಮದ್ ನಾತಿಕ್ ಆಲಂ 156, ಪ್ರಸಾದ ತಾಲೂರಿ 792, ಶಿವಶಂಕ್ರಯ್ಯ ಸ್ವಾಮಿ ಶೆಟ್ಟರ್ ಕಾರಟಗಿ 522, ಷಣ್ಮುಖ ವಾಲ್ಮೀಕಿ 93 ಹಾಗೂ ಸಂಗಮೇಶ ಸುಗ್ರೀವ 372 ಮತಗಳನ್ನು ಪಡೆದಿದ್ದಾರೆ.


ಈ ಕ್ಷೇತ್ರದಲ್ಲಿ 2,02,239 ಮತದಾರ ಪೈಕಿ 1,59,433 ಮತಗಳು ಚಲಾವಣೆಗೊಂಡಿದ್ದು, ನೋಟಾಕ್ಕೆ 426 ಮತಗಳು ಚಲಾವಣೆಗೊಂಡಿವೆ ಹಾಗೂ ಯಾವುದೇ ಮತಗಳು ತಿರಸ್ಕೃತಗೊಂಡಿರುವುದಿಲ್ಲ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಅವರು ತಿಳಿಸಿದ್ದಾರೆ.

error: Content is protected !!