ಗಂಗಾವತಿ :ಗಂಗಾವತಿ ತಾಲೂಕಿನಲ್ಲಿ ತಹಸೀಲ್ದಾರ್ ಆಫೀಸ್ ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಾದರೂ ಯಾವೊಬ್ಬ ಅಧಿಕಾರಿಯು ಕೆಲಸಕ್ಕೆ ಹಾಜರಾಗದೆ ಎಲ್ಲಾ ಅಧಿಕಾರಿಗಳು ಕೆಲಸದಲ್ಲಿ    ಗೈರು ಹಾಜರಾಗುತ್ತಾರೆ.
ಆದರೆ ಎಲ್ಲರೂ ಹೇಳುತ್ತಾರೆ ಸರಕಾರಿ ಕೆಲಸ ದೇವರ ಕೆಲಸ ಎಂದು ಆದರೆ ಗಂಗಾವತಿ ತಹಸಿಲ್ ಕಚೇರಿಯಲ್ಲಿರುವಂತಹ ಅಧಿಕಾರಿಗಳಿಗೆ ಸರ್ಕಾರಿ ಕೆಲಸವೂ ಅಥವಾ ಇದು ಬಿಟ್ಟಿ ಕೆಲಸ  ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಸರ್ಕಾರ ಅಧಿಕಾರಿಗಳಿಗೆ  ಚುನಾವಣೆಯು ಒಂದು ಕುಂಟು ನೆಪ ಹೇಳಿಕೊಂಡು  ಯಾವೊಬ್ಬ ಅಧಿಕಾರಿಯೂ ಇಲಾಖೆ ಹಾಜರಾಗದೆ ಸರ್ಕಾರಿ ಕೆಲಸಕ್ಕೆ ಗೈರುಹಾಜರಿ ಆಗಿರುತ್ತಾರೆ
ಇದಲ್ಲದೆ ಕರ್ನಾಟಕ ವಿಧಾನಸಭಾ ಚುನಾವಣೆಯ ನಿಗದಿಯಾಗಿ ನೀತಿ ಸಂಹಿತೆ ಜಾರಿ ಅದಾಗಿನಿಂದ ಮೇ 10 ಚುನಾವಣೆ ನಡೆಯವರಿಗೆ  ಗಂಗಾವತಿ ಬಹುತೇಕ ಸರ್ಕಾರಿ ಅಧಿಕಾರಿಗಳು ಚುನಾವಣೆ ನೆಪದಲ್ಲಿ ಕಚೇರಿಗೆ ಬಾರದೆ ಚಕ್ಕರಾಕುತ್ತಿರುವುದು ಮಾತ್ರ ದುರಂತ, ಜನಸಾಮಾನ್ಯರು ಪ್ರಮುಖವಾಗಿ ಸರ್ಕಾರಿ ಕಚೇರಿಗಳಿಗೆ ತೆರಳಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಲು ಅಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ತೆರಳಿದರೆ ಆಯಾ ಸರ್ಕಾರಿ ಕಚೇರಿ ಸಿಬ್ಬಂದಿಗಳು ಹೇಳುವುದು ಮಾತ್ರ ಸಾಹೇಬರು ಚುನಾವಣೆಯಲ್ಲಿ ಬಿಜಿ ಇದ್ದಾರೆ. ಇವತ್ತು ವಿಡಿಯೋ ಕಾನ್ಸರೆನ್ಸ್ ಇದೆ. ಎಂದು ಹೇಳುತ್ತಾರೆ.

ಚುನಾವಣೆ ಮೀಟಿಂಗ್ ಇದೆ ಚುನಾವಣೆಯ ಚೆಕ್ಟೋಸ್ಟ್ ಕೆಲಸದಲ್ಲಿದ್ದಾರೆ ಹೀಗೆ ನಾನಾ ರೀತಿಯ ಸುಳ್ಳು ನೆಪಗಳನ್ನು ಹೇಳಿ ಕಚೇರಿಗೆ ಬಾರದೆ ಗೈರು ಹಾಗುತ್ತಿದ್ದಾರೆ. ಕಚೇರಿಯ ಸಿಬಂದಿಗಳನ್ನು, ಇತರ ಅಧಿಕಾರಿಗಳನ್ನು ವಿಚಾರಿಸಿದಾಗ ಸಾಹೇಬ್ರು ಚುನಾವಣೆ ಡ್ಯೂಟಿ ಗೆ ಹೋಗಿದ್ದಾರೆ  ಅಂತ ಹೇಳುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದ್ರೆ ನಾನು ಚುನಾವಣೆ ಡ್ಯೂಟಿಯಲ್ಲಿದ್ದೇನೆ ಎಂದು ಹೇಳುತ್ತಿರುವುದು ಮಾತ್ರ ದುರಂತ ಸಾರ್ವಜನಿಕರಿಗೆ ಸಾಮಾನ್ಯವಾಗಿ ನಾಳೆ ಬಾ ಎನ್ನುವ ಬೋರ್ಡ್ ಹಾಕಿದಂತಾಗಿದೆ.

ತಾಲೂಕು ಚುನಾವಣಾ ಅಧಿಕಾರಿಗಳಾಗಿ ತಾಲೂಕ ದಂಡಾಧಿಕಾರಿಗಳು ಇರುತ್ತಾರೆ ಇಲಾಖೆ ಅಧಿಕಾರಿಗಳಿಗೆ ಚುನಾವಣೆಯ ಬಿಸಿ ತಟ್ಟುತ್ತದೆ ಆದರೆ ಉಳಿದ ಎಲ್ಲಾ ಇಲಾಖೆ ಅಧಿಕಾರಿಗಳು ಮಾತ್ರ ಇದನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಬೇಸಿಗೆ ಬಿಸಿಲಿನ ತಪ್ಪಿಸಿಕೊಳ್ಳಲು ಚುನಾವಣೆಯ ಅಸ್ತ್ರವನ್ನು ಬಳಸಿಕೊಂಡು ತಮ್ಮ ಖಾಸಗಿ ಕೆಲಸಗಳಿಗೆ ತೆರಳುತ್ತಿದ್ದಾರೆ ಇದರಿಂದಾಗಿ
ಸಾರ್ವಜನಿಕರು ಗೋಳ್ಳಾಡುವ ಸ್ಥಿತಿ  ಬಂದಿದೆ
ಮತ್ತು ತಾಹಸೀಲ್ದಾರ್ ಕಾರ್ಯಾಲಯದಲ್ಲಿ ನಿನ್ನೆ ಚುನಾವಣೆ ಮುಗಿದರೂ ಇವತ್ತು ಇದೇ ಗಂಗಾವತಿ ತಹಸೀಲ್ದಾರರ ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿಯು ಅಥವಾ ಸಿಬ್ಬಂದಿಯಾಗಲಿ ಕೆಲಸಕ್ಕೆ ಹಾಜರಾಗಿರುವುದಿಲ್ಲ  ಇದನ್ನು ನೋಡಿದರೆ ಮೇಲಿರುವಂತ ಚುನಾವಣೆ ಅಧಿಕಾರಿಗಳ ಭಯ ಇಲ್ಲದಂತೆಯಾಗಿದ  ಕಛೇರಿಯಲ್ಲಿ ಒಳಗಡೆ ನೋಡಿದರೆ ಯಾವ ರೂಮಲ್ಲಿ ಕೂಡ ಯಾವ ಅಧಿಕಾರಿಯು ಇರದೇ ಕಚೇರಿಯಲ್ಲಿ ಖಾಲಿ ಖಾಲಿಯಾಗಿ ಬಿಕೋ ಬಿಕೋ ಎನ್ನುತ್ತದೆ. ರೈತರು ಹಳ್ಳಿಗಳಿಂದ ಇಷ್ಟು ದಿನ ಚುನಾವಣೆಯಿತ್ತು ಯಾವ ಅಧಿಕಾರಿಗಳು ಸಿಗದೆ ನಮ್ಮ ಕೆಲಸಗಳೆಲ್ಲ ಹಾಗೆ ಪೆಂಡಿಂಗ್ ನಲ್ಲಿ ಇದ್ದವು ಅದನ್ನು ಇವತ್ತು  ಅಧಿಕಾರಿಗಳಿಗೆ ಭೇಟಿ ಮಾಡಿ ಕೆಲಸವನ್ನು ಮುಗಿಸಿಕೊಂಡು ಬರೋಣ ಅಂತ ಹಳ್ಳಿಗಳಿಂದ   ಬಂದಿರುತ್ತಾರೆ ಆದರೆ ಇಂದು ಗಂಗಾವತಿ  ಆಫೀಸ್ ನಲ್ಲಿ ಯಾವೊಬ್ಬ ಅಧಿಕಾರಿಗಳಿಲ್ಲದೆ ಖಾಲಿಯಾಗಿರುವುದು ನೋಡಿದರೆ ಆಶ್ಚರ್ಯ ಆಗುತ್ತದೆ.

ಈ ರೀತಿಯಾಗಿರೋದು ಇದೇ ಮೊದಲು ಬಾರಿಗೆ ಈ  ರೀತಿ ಮುಂದೆ ಆದರೆ ನಮ್ಮ ಕೆಲಸಗಳು ಹೇಗೆ ಆದರೆ ಮುಂದೆ ನಮ್ಮ ಕೆಲಸ ಹೇಗೆ ಆಗುವುದೆಂಬ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ ಮತ್ತು ಇದರ ಬಗ್ಗೆ ಚುನಾವಣೆ ಅಧಿಕಾರಿಗಳು ಈ ರೀತಿಯಾಗಿ ಯಾಕೆ ಮೌನವಹಿಸಿರುವುದು ಎಂಬುದು ತಿಳಿಯದೆಂತಾಗಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ ಇನ್ನು ನಾಳೆ ಇಲ್ಲ ನಾಡಿದ್ದು ಚುನಾವಣೆಯ ಫಲಿತಾಂಶವಿದ್ದು ಆ ಫಲಿತಾಂಶ ಮುಗಿದ ನಂತರ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುತ್ತಾರೆ ಅಥವಾ ಯಾವುದೋ ಒಂದು ಕುಂಟು ನೆಪ ಹೇಳಿಕೊಂಡು ಮನೆಯಲ್ಲಿ ಕುಂತು ಕಾಲಕರಣ ಮಾಡುತ್ತಾರೋ ಈ ರೀತಿ ಆದರೆ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಕೆಲಸದ ಗತಿ ಆದೋಗತಿಯಾಗಿ ಬಿಡುವುದೆಂಬ ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಈ ವರದಿಯನ್ನು ನೋಡಿದ ಕೂಡಲೇ ತಹಶೀಲ್ದಾರರು ಎಚ್ಚೆತ್ತುಕೊಂಡು ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸುತ್ತಾರೋ ಅಥವಾ ಹೀಗೆ ಕಾಲಾಹರಣ ಮಾಡಿಕೊಂಡು ಕಾಲ ಕಳೆಯಿರಿ ಎಂದು ಬಿಡುತ್ತಾರೋ ಮುಂದೆ ಕಾದು ನೋಡೋಣ.

ಗಂಗಾವತಿ. ಒಬ್ಬ ಉನ್ನತ ಸ್ಥಾನದಲ್ಲಿರುವ ಚುನಾವಣೆ ಅಧಿಕಾರಿಗಳು ಈ ರೀತಿಯಾಗಿ ಹೇಳಿಕೆ ನೀಡಿರುವುದು  ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತ ವಿಷಯ. ಈ ವಿಷಯವನ್ನು ಸಮರ್ಥಿಸಿಕೊಳ್ಳಬೇಕು. ನಾನು ಕೂಡ ನೋಡಿದಾಗ ಬಹುತೇಕ ಸರ್ಕಾರಿ ಅಧಿಕಾರಿಗಳು ಚುನಾವಣೆ ನೆಪದಲ್ಲಿ ತಮ್ಮ ಕಚೇರಿಯಲ್ಲಿ ಇರದೆ ಇರುವುದುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ ಸಂಬಂಧ | ಪಟ್ಟ ಚುನಾವಣೆ ಅಧಿಕಾರಿಗಳು ಪರಿಶೀಲನೆ ನಡಸಿ ಸರ್ಕಾರಿ ಕೆಲಸಕ್ಕೆ ಅನವುಮಾಡಿ ಸಾರ್ವಜನಿಕರಿಗೆ ತೊಂದ್ರೆ ಆಗದಂತೆ ಇಲಾಖೆಯ ಅಧಿಕಾರಿಗಳಿಗೆ ತಾಕಿತು ಮಾಡಲಿ. ಎಂದು ಹೇಳಿದರೆ
ಮಲ್ಲೇಶ್ ಕರ್ನಾಟಕ ದಲಿತ ರಕ್ಷಣ ವೇದಿಕೆ ತಾಲೂಕ್ ಅಧ್ಯಕ್ಷ

ಬಾಕ್ಸ್
ಚುನಾವಣೆ ಅಧಿಕಾರಿಗಳು ಹೇಳಿಕೆ. ಈ ವಿಷಯ ನನ್ನ ಗಮನಕ್ಕೆ ಇಲ್ಲ ನಾನು ಯಾರು ಬಂದಿದ್ದರು ಯಾರು ಹೋಗಿದ್ದರು ನನಗೆ ಗೊತ್ತಿಲ್ಲ ನಾನು ಯಾರನ್ನಾದರೂ ವಿಚಾರಿಸಿ ಒಂದು ವೇಳೆ ಯಾರು ಹಾಜರಿ ಇಲ್ಲ ಅಂದರೆ ಹೀಗೆ ಕೆಲಸಕ್ಕೆ ಕಳಿಸುತ್ತೇನೆ ಎಂದು ದೂರವಾಣಿ ಮೂಲಕ ಸಂಪರ್ಕಿಸಿದಾಗ ತಹಶೀಲ್ದಾರ್ ಹೇಳಿಕೆಯು ಈ ರೀತಿಯಾಗಿದೆ

ಮಂಜುನಾಥ್ ತಹಸೀಲ್ದಾರರು ಮತ್ತು ಚುನಾವಣೆ ಅಧಿಕಾರಿಗಳು

error: Content is protected !!