64.81 ಲಕ್ಷ ನಗದು, 137 ಲೀ. ಮದ್ಯ ವಶಕ್ಕೆ: ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ

ಬಳ್ಳಾರಿ,ಮೇ 09: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಎಫ್‍ಎಸ್‍ಟಿ ತಂಡ ಹಾಗೂ ಪೊಲೀಸ್ ಇಲಾಖೆ ತಪಾಸಣೆ ವೇಳೆ ಸೋಮವಾರದಂದು ಸೂಕ್ತ ದಾಖಲೆಯಿಲ್ಲದ 64,81,110 ರೂ. ಮೊತ್ತದ ನಗದು ಮತ್ತು ಅನಧಿಕೃತವಾಗಿ ಸಾಗಿಸುತ್ತಿದ್ದ 60,513 ರೂ. ಮೌಲ್ಯದ 137.08 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ಜಿಲ್ಲೆಯಲ್ಲಿ 3 ಚುನಾವಣಾ ವೆಚ್ಚ ವೀಕ್ಷಕರು, 51 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ.

ಫ್ಲೈಯಿಂಗ್ ಸ್ಕ್ವಾಡ್ ತಂಡವು ತಪಾಸಣೆ ವೇಳೆ 61,70,310 ರೂ. ಮೊತ್ತದ ನಗದು ಹಾಗೂ ಪೊಲೀಸ್ ಇಲಾಖೆ ತಪಾಸಣೆ ವೇಳೆ 3,10,800 ರೂ. ನಗದು ಸೇರಿದಂತೆ ಒಟ್ಟು 64,81,110 ರೂ. ಮೊತ್ತದ ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆಯಿಂದ 20,117 ರೂ. ಮೌಲ್ಯದ 46.48 ಲೀಟರ್ ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ 40,396 ರೂ. ಮೌಲ್ಯದ 90.60 ಲೀಟರ್ ಮದ್ಯ ಸೇರಿದಂತೆ ಒಟ್ಟು 60,513 ರೂ. ಮೌಲ್ಯದ 137.08 ಲೀಟರ್ ಮದ್ಯ ವಶಪಡಿಸಿಕೊಂಡು  ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
——

error: Content is protected !!