
ಹಾವೇರಿ: ಇಂದು ಮುಖ್ಯಮಂತ್ರಿ ತವರು ಕ್ಷೇತ್ರ ಹಾವೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತಬೇಟೆಗೆ ಇಳಿದರು. ಬಿಜೆಪಿಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದಂತ ಅವರು, ಹಾವೇರಿಯ ಜನತೆಗೆ ನನ್ನ ನಮಸ್ಕಾರ ಎಂಬುದಾಗಿ ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು.
ಹಾವೇರಿ ಹೊರವಲಯದಲ್ಲಿ ನಡೆಯುತ್ತಿರುವಂತ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದಂತ ಅವರು, ಕಾಂಗ್ರೆಸ್ ನವರು ಸುಳ್ಳಿನ ಭರವಸೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಲಿಂಗಾಯತ, ಹಿಂದುಳಿದ ವರ್ಗದವರ ಸಿಟ್ಟಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಹಾವೇರಿಯಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳಾಗಿವೆ. ಡಬಲ್ ಇಂಡಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಂಗ್ರೆಸ್ ತುಷ್ಠೀಕರ ರಾಜಕಾರಣದಿಂದ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂದು ಗುಡುಗಿದರು.
ಹಾವೇರಿಯಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗಿದೆ. ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿಯೂ ಆಗಿದೆ. ಬಿಎಸ್ ವೈ, ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಂಗ್ರೆಸ್ ದುರಾಡಳಿತದಿಂದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ದೇಶವನ್ನು ಬರ್ಬಾರ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ 85% ಕಮೀಷನ್ ಹೊಡೆಯುತ್ತಿತ್ತು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಪಾರ್ಟಿಯಾಗಿದೆ. ದೇಶದ ಜನರು ಕಾಂಗ್ರೆಸ್ ಗೆ ಬಹುಮತ ನೀಡಿದ್ರು ಆಗ ಏನೂ ಮಾಡಲಿಲ್ಲ ಎಂದು ಹೇಳಿದರು.
ಭಯೋತ್ಪಾದಕರಿಗೆ ಬೆಂಬಲಿಸುತ್ತಿರುವುದ ಕಾಂಗ್ರೆಸ್ ಪಾರ್ಟಿಯಾಗಿದೆ. ರೈತರಿಗೆ ವಿತರಿಸುವ ಯೂರಿಯಾದಲ್ಲೂ ಕಮೀಷನ್ ಅನ್ನು ಕಾಂಗ್ರೆಸ್ ಹೊಡೆದಿದೆ. ಈ ಬಾರಿಯ ಸರ್ಕಾರ ಬಿಜೆಪಿಯ ಬಹುಮತದ ಸರ್ಕಾರವಾಗಬೇಕು ಎಂದು ಮನವಿ ಮಾಡಿದರು.