ಗಂಗಾವತಿ : ಹನುಮ ದೇವರಿಗೆ ಸಮಸ್ಯೆ ಮಾಡಿದರೆ ಹೀಗೆ ಆಗೋದು ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಡಿ.ಕೆ. ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಜರಂಗದಳ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿದ್ದು, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಬಡಿದು, ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿತ್ತು. ಅದೃಷ್ವಶಾತ್ ಡಿ.ಕೆ. ಶಿವಕುಮಾರ್ ಮತ್ತಿತರರು ಪಾರಾಗಿದ್ದರು. ಈ ಘಟನೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಅಂಶಗಳನ್ನು ತಳುಕುಹಾಕಿ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯತ್ನಾಳ್, ಹನುಮ ದೇವರಿಗೆ ಸಮಸ್ಯೆ ಮಾಡಿದರೆ ಹೀಗೆ ಆಗೋದು, ಈಗ ಬರಿ ಹೆಲಿಕಾಪ್ಟರ್ ಗ್ಲಾಸ್ ಅಷ್ಟೇ ಒಡೆದಿದೆ… ಇನ್ನೊಮ್ಮೆ ಏನಾದ್ರೂ ಕಿರಿಕ್ ಮಾಡಿದ್ರೆ. ಪವನಪುತ್ರ ಹನುಮಾನ್ ಕಿ ಜೈ..ಎಂದು ಕೈಚಳಕ ಮಾಡಿ ವ್ಯಂಗ್ಯವಾಡಿದ್ದಾರೆ. ಹೆಸರು ಬಳಸದೆ ದುಡ್ಡು ತೆಗೆದು ಕೊಂಡು ಮತ ಮಾತ್ರ ಪರಣ್ಣ ಅವರಿಗೆ ಹಾಕಿ ಎಂದು ರೆಡ್ಡಿ ವಿರುದ್ಧ ಪ್ರಹಾರ ನಡೆಸಿದರು.

ಮಾಧ್ಯಮ ದವರು ಕೇಳಿದ ಪ್ರಶ್ನೆ ಗೆ ಪ್ರಿಯಾಂಕ ಗಾಂಧಿಗೆ ವಿಶ್ವಕನ್ನೆ ಎಂಬ ಪದವನ್ನು ಬಳಸಿದ್ದೀರಿ ಇದರ ಬಗ್ಗೆ ಸೋಕಸ್ ನೋಟಿಸ್ ಬಂದಿದೆ ಇಂದು ಮಾಧ್ಯಮದವರು ಪ್ರಶ್ನೆ ಕೇಳಿದರು ಅದಕ್ಕೆ ಉತ್ತರಿಸಿದ ಯತ್ನಾಳ್ ನಾನು ಅವರಿಗೆ ವಿಶ್ವಕನ್ಯೆಯೇ? ಎಂದಿದ್ದೇನೆ.ಅದನ್ನು ತಿರುಚಲಾಗಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಯಾವುದೇ ಕಾರಣಕ್ಕೂ ಬಜರಂಗದಳ ನಿಷೇಧ ಮಾಡೋಕೆ ಆಗೋದಿಲ್ಲ, ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಹುಟ್ಟಿ ಬಂದರೂ ಅದು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

error: Content is protected !!