
ಗಂಗಾವತಿ ನಗರಕ್ಕೆ ಚುನಾವಣೆ ಪ್ರಚಾರದ ನಿಮಿತ್ಯ ಮಾಜಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ಶ್ರೀರಾಮುಲು ಅವರು ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರ ಪರವಾಗಿ ಪ್ರಚಾರಕ್ಕೆ ಬಂದಂತ ಸಮಯದಲ್ಲಿ.
ಕೊಪ್ಪಳ ಜಿಲ್ಲಾ ಚುನಾವಣೆ ಪ್ರಭಾರಿಗಳಾದ ದೆಹಲಿ ಶಾಸಕರಾದ ಶ್ರೀ ಅಜಯ್ ಮಹಾವರ್ ಅವರನ್ನ ಹಾಗೂ ಗಂಗಾವತಿ ಚುನಾವಣೆ ಪ್ರಭಾರಿಗಳಾದ ಪ್ರಭು ಕಪಗಲ್, ವಿಐಪಿ ಭದ್ರತಾ ಉಸ್ತುವಾರಿಗಳಾದ ಮಯಾಂಕ್ ಜಿ ಅವರನ್ನ ಬೇಟಿ ಮಾಡಿ ಕ್ಷೇತ್ರದ ಬೆಳವಣಿಗಳ ಬಗ್ಗೆ ಚೆರ್ಚಿಸಿ

ನಂತರ ಶಾಸಕರು, ಪ್ರಭಾರಿಗಳು, ಹಾಗೂ ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತಗಾರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಮಳಗಿ , ಮಾಧ್ಯಮ ವಕ್ತಾರರಾದ ವೀರಭದ್ರಪ್ಪ ನಾಯಕ ಅವರೊಂದಿಗೆ ಸುದ್ದಿಗೊಷ್ಠಿ ನೆಡೆಸಿದರು, ನಾಳೆ ಯೋಗಿ ಆದಿತ್ಯನಾಥ ಅವರ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು
ನಂತರ ತರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮರವಣಿಗೆ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿ ಗಾಂಧಿ ವೃತ್ತ ಮಾರ್ಗವಾಗಿ, ಮಹಾವೀರ ಸರ್ಕಲ್, ಹಾಗೂ ಸಿಬಿಎಸ್ ವೃತ್ತದಿಂದ ಬಿಜೆಪಿ ಚುನಾವಣಾ ಕಛೇರಿ ತಲುಪಿದರು

ಈ ಸಮಯದಲ್ಲಿ ಅವರೊಂದಿಗೆ ರಾಘವೆಂದ್ರ ಶೆಟ್ಟಿ ಮುಖಂಡರಾದ ಸಿದ್ದರಾಮಯ್ಯ ಸ್ವಾಮಿ, ಸೂರಿಬಾಬು ನೆಕ್ಕಂಟಿ, ಸಂತೋಷ್ ಕೆಲೋಜಿ, ಸಂಗಯ್ಯಸ್ವಾಮಿ ಸಂಶಿಮಠ, ಹನುಮಂತಪ್ಪ ನಾಯಕ, ಫದ್ಮ, ರಾಧಾ ಉಮೇಶ್ , ರೇಖಾ ಟಿ ರಾಯಭಾಗಿ, ಶೋಭಾ ರಾಯ್ಕರ್, ಶಕುಂತಲಾ ಕಲ್ಲೂರು ಹಾಗೂ ಪಕ್ಷದ ಎಲ್ಲಾ ಮೋರ್ಚಾಗಳ ಸಮಸ್ತ ಪಧಾದಿಕಾರಿಗಳು, ಕಾರ್ಯಕರ್ತ ಬಂಧುಗಳು , ಹಿರಿಯರು, ಮುಖಂಡರು, ಉಪಸ್ಥಿತರಿದ್ದರು.