ಗಂಗಾವತಿ :ನಗರದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಯಿತು ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಜಿಲ್ಲಾಧ್ಯಕ್ಷರು ಶರಣಯ್ಯ ಮಾತನಾಡಿ

ನಮ್ಮ ಪಕ್ಷವೂ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದು ನಾವುಗಳು ಆ ಹೋರಾಟದ ಮೂಲಕವೇ 2013 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಇಡೀ ದೇಶವೇ ಬೆರಗಾಗುವಂತೆ ಮತ್ತು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ 28 ಕ್ಷೇತ್ರಗಳಲ್ಲಿ ಆಶ್ಚರ್ಯ ಮೂಡಿಸಿ ಜಯವನ್ನು ದಾಖಲಿಸಿದೆವು


ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿಯ ಮುಖ್ಯಮಂತ್ರಿಗಳು  ಅರವಿಂದ್ ಕೇಜ್ರಿವಾಲ್ ಅವರು ಅಂತಹ ಒಂದು ಚಮತ್ಕಾರವನ್ನು ಆ ಚುನಾವಣೆಯಲ್ಲಿ ಮಾಡಿದರು


49 ದಿನಗಳ ಆಡಳಿತದಲ್ಲಿ ನಾವು ನೀಡಿದ ಜನಪರ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ನೀರು ಯೋಜನೆಯ ಅತ್ಯಂತ ಜನಪ್ರಿಯವಾಯಿತು ನಂತರ 2015ರಲ್ಲಿ ದೆಹಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 70 ರಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜಕೀಯ ಇತಿಹಾಸವನ್ನೇ ಸೃಷ್ಟಿ ಮಾಡಿತು ಅಧಿಕಾರಕ್ಕೆ ಬಂದ  ಮೇಲೆ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಮಾಡಿದ ಕೆಲಸಗಳನ್ನು ಎಲ್ಲಾ ಸರ್ಕಾರಗಳಿಗೆ ಮಾದರಿಯಾಗಿದ್ದು ದೆಹಲಿಯ ಮಾದರಿ ಎಂದು ಪ್ರಸಿದ್ಧವಾಗಿದೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಮಾಡಿದಂತಹ   ಬದಲಾವಣೆ ಎಲ್ಲರೂ ಸಹ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿತು


ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಏನೆಲ್ಲಾ ಬದಲಾವಣೆಗಳು ಸಾಧ್ಯ ಎಂಬುದನ್ನು ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ  ದೆಹಲಿಯ ಆಫ್ ಸರ್ಕಾರ ಮಾಡಿ ತೋರಿಸಿದೆ


ದೆಹಲಿ ಮಾದರಿಯನ್ನೆ ನಾವು ಮುಂದಿಟ್ಟುಕೊಂಡು ಪ್ರತಿ ರಾಜ್ಯದಲ್ಲಿ ನಾವು ಚುನಾವಣೆಯನ್ನು ಪ್ರವೇಶಿಸುತ್ತೇವೆ ಆದರೆ ಅದರ ಫಲಿತಾಂಶ 2022ರ ಪಂಜಾಬ್  ಚುನಾವಣೆ ಗೋವಾದಲ್ಲಿಯೂ ಕೂಡ ನಾವು ಇಬ್ಬರು ಶಾಸಕರು ಮತ್ತು 6.8 ಮತಗಳನ್ನು ಪಡೆಯುವ ಮೂಲಕ ರಾಜ್ಯಪಕ್ಷದ ಸ್ಥಾನಮಾನವನ್ನು ಪಡೆದಿದ್ದೇವೆ ದೆಹಲಿಯಲ್ಲಿ 15 ವರ್ಷಗಳಿಂದ ಎಂ ಸಿ ಡಿ ಯಲ್ಲಿ ಆಡಳಿತದಲ್ಲಿ ಇದ್ದ ಬಿಜೆಪಿಯನ್ನು ಅಧಿಕಾರದಿಂದ ಉಳಿಸಿ ಇಂದು ಆಮ್ ಆದ್ಮಿ ಗೆ ದೆಹಲಿಯ ಜನ ಆಶೀರ್ವಾದ ಮಾಡಿ ಅಧಿಕಾರಿ ನೀಡಿದ್ದಾರೆ


ಮೊನ್ನೆ ತಾನೆ ನಡೆದ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಗುಜರಾತ್ ನಲ್ಲಿ ಐದು ಸ್ಥಾನಗಳನ್ನು ನಾವು ಗೆದ್ದಿದ್ದೇವೆ ಶೇಕಡ 13 ಪ್ರತಿಶತ ಮತಗಳನ್ನು ಪಡೆದು ರಾಜ್ಯ ಪಕ್ಷವಾಗಿ ಹೊರಹೊಮ್ಮಿದೆ ಮತ್ತು 41 ಲಕ್ಷಕ್ಕೂ ಅಧಿಕ ಮತದಾರರು ಆಮ್ ಆದ್ಮಿಗೆ ಮತ ಚಲಾಯಿಸಿ ನಮ್ಮನ್ನು ಬೆಂಬಲಿಸಿದ್ದಾರೆ

ಈ ಮೂಲಕ ಆಮ್ ಆದ್ಮಿ ಪಕ್ಷವು ಈಗ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಗುರ್ತಿಸಿಕೊಂಡಿದ್ದು  ಹಾಗಾಗಿ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ ಕೇವಲ ಹತ್ತು ವರ್ಷಗಳಲ್ಲಿ ಎರಡು ರಾಜ್ಯಗಳಲ್ಲಿ ಅಧಿಕಾರವನ್ನು ಹೊಂದಿ ಆಡಳಿತ ಮುನ್ನಡೆಸುತ್ತಿದೆ


ಇಂದು ಆಮ್ ಆದ್ಮಿ ಪಕ್ಷವು ಇಡೀ ದೇಶಕ್ಕೆ ರಾಜಕೀಯ ಪರ್ಯಾಯವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಏಕಕಾಲದಲ್ಲಿ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಎಲ್ಲಾ ಚುನಾವಣೆಗಳಿಂದ   ಸಾಬೀತ್ ಮಾಡುತ್ತಾ ಬಂದಿದೆ ಮತ್ತು ಆಮ್ ಆದ್ಮಿ ಪಕ್ಷವು ಜನಸಾಮಾನ್ಯ ಪಕ್ಷವಾಗಿದ್ದು ಇಲ್ಲಿ ಕಾರ್ಯಕರ್ತರನ್ನು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ

ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ಇಡೀ ದೇಶಕ್ಕೆ ಮಾದರಿಯಾಗಿ ಹೊರ ಹೊಮ್ಮಲಿದೆ  ಮತ್ತು ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷ ವಾಗುವುದು ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ನಾಗರಿಕರಿಗೆ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಮತ್ತು ದೇಶದ ಜನತೆಗೆ ಈ ಮೂಲಕ ಆಮ್ ಆದ್ಮಿ ಪಕ್ಷದಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ ಎಂದು ಪಕ್ಷದ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
ಈ ಸಂದರ್ಭದಲ್ಲಿ ಹುಸೇನ್ ಸಾಬ್ ಗಂಗನಾಳ ಶರಣಪ್ಪ ಸಜ್ಜೆಹೊಲ ತಾಲೂಕು ಅಧ್ಯಕ್ಷರು ಮತ್ತು ರೇಣುಕಾ ಬಸವರಾಜ ಪರಸುರಮ ಇತರರು ಉಪಸ್ಥಿತರಿದ್ದರು……

error: Content is protected !!