ಕೊಪ್ಪಳ ಏಪ್ರಿಲ್ 17 : ಕನಕಗಿರಿ, ಕೊಪ್ಪಳ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ಸೇರಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರೀಲ್ 17ರಂದು ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಪರಪ್ಪ ಈಶ್ವರಪ್ಪ ಮುನವಳ್ಳಿ 2 ನಾಮಪತ್ರಗಳನ್ನು ಮತ್ತು ಕರ್ನಾಟಕ ರಾಷ್ಟ್ರ ಸಮಿತಿಯಿಂದ ಕನಕಪ್ಪ ಹನುಮಂತಪ್ಪ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸಂಗಮೇಶ ಸುಗ್ರೀವಾ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸನಿಂದ ಶಿವರಾಜ ಎಸ್ ತಂಗಡಗಿ 4 ನಾಮಪತ್ರಗಳನ್ನು, ಪಕ್ಷೇತರ ಅಭ್ಯರ್ಥಿಯಾಗಿ ರಮೇಶ ಭೀಮಯ್ಯ ಮಾಲದಾಸರ ಮತ್ತು ಹೆಚ್ ಶಶಿಕುಮಾರ ರೇಣುಕಪ್ಪ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸನಿಂದ ಕೆ ರಾಘವೇಂದ್ರ ಬಸವರಾಜ ಮತ್ತು
ಕರ್ನಾಟಕ ರಾಷ್ಟ್ರ ಸಮಿತಿಯಿಂದ ಅಡವಿ ಹನುಮಪ್ಪ ಗೊಡಚಳ್ಳಿ ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ವಜೀರ್ ಅಲಿ ಬಾಬುಸಾಬ ಗೋನಾಳ, ಭಾರತೀಯ ಜನತಾ ಪಾರ್ಟಿಯಿಂದ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಕಾಳಪ್ಪ ಯಚ್ಚರಪ್ಪ ಬಡಿಗೇರ ಅವರು ತಲಾ 2 ನಾಮಪತ್ರಗಳನ್ನು ಹಾಗೂ ಇಂಡಿಯನ್ ನ್ಯಾಷನಲ್ ಕಾಂಗ್ರೇಸ್‌ನಿಂದ ಅಮರೇಗೌಡ ಎಲ್ ಪಾಟೀಲ ಬಯ್ಯಾಪೂರ, ಕರ್ನಾಟಕ ರಾಜ್ಯ ಪ್ರಗತಿ ಪಕ್ಷದಿಂದ ಚಂದ್ರಶೇಖರಯ್ಯ ಹಿರೇಮಠ, ಜನತಾದಾಳ (ಜಾತ್ಯಾತೀತ)ದಿಂದ ಶರಣಪ್ಪ ಸಿದ್ದಪ್ಪ ಕುಂಬಾರ ಹಾಗೂ ತುಕಾರಾಮ ಕನಕಪ್ಪ ಸುರ್ವೆ ಅವರು ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸನಿಂದ ಬಸವರಾಜ ರಾಯರೆಡ್ಡಿ ಅವರು 4 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.