ಧಾವಾಡ : ಮತ್ತೊಮ್ಮೆ ಲಿಂಗಾಯತರೇ ಸಿಎಂ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದಲ್ಲಿ ಮಾತನಾಡಿದ ಪಾಟೀಲ್ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಬಿಜೆಪಿಯಲ್ಲಿ ಈ ಬಾರಿ ಎರಡನೇ ಸಾಲಿನ ನಾಯಕತ್ವ ಬರಲಿದ್ದು, ಲಿಂಗಾಯತರೇ ಮುಂದಿನ ಸಿಎಂ ಆಗಲಿದ್ದಾರೆ. ಸಾಕಷ್ಟು ಲಿಂಗಾಯತ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಅದೇ ರೀತಿ ನಾನು ಸಿಎಂ ಹುದ್ದೆಯ ರೇಸ್ ನಲ್ಲಿದ್ದೇನೆ ಎಂದು ಹೇಳಲ್ಲ, ಕರ್ನಾಟಕದಲ್ಲಿ ಬಿಜೆಪಿಯವರೇ ಸಿಎಂ ಆಗುತ್ತಾರೆ. ಮತ್ತೊಮ್ಮೆ ಲಿಂಗಾಯತರೇ ಸಿಎಂ ಆಗುತ್ತಾರೆ ಎಂದು ಶಾಸಕ ಬಸವನೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

error: Content is protected !!