ಕೇಂದ್ರ ಮತ್ತು ರಾಜ್ಯ ಸರ್ಕಾರ ದ ಕೋಟಿ ಕೋಟಿ ಅನುದಾನ ಬಳಸಿಕೊಂಡು ದಿನ ದಲಿತ ರಿಗೆ ಬಡವರಿಗೆ ಕೂಲಿ ಕಾರ್ಮಿಕರಿಗೆ ಉಪಯೋಗ ವಾಗಲಿ ಯಾರೊಬ್ಬರೂ ಹಸಿವಿನಿಂದ ಬಳಲು ಬಾರದು ಎನ್ನುವ ಉದ್ದೇಶ ದಿಂದ ಸರ್ಕಾರ ಗಳು ಕೋಟಿ ಕೋಟಿ ಅನುದಾನ ವನ್ನು ಅನ್ನಭಾಗ್ಯ ಕ್ಕೆ ನೀಡುತ್ತಿವೆ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ದಂದೆಕೋರರು ತಮ್ಮ ಲಾಭ ಕ್ಕಾಗಿ ಬಡವರ ಹೊಟ್ಟೆ ಮೇಲೆ ಹೊಡಿಯುವ ಕೆಲಸ ಮಾಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡಲಾದ ಅಕ್ಕಿ ಯನ್ನು ಕೆಲವು ದಂದೆ ಕೋರರು ಕಾಳಸಂತೆ ಯಲ್ಲಿ ಮಾರಾಟ ಮಾಡುತ್ತಿದ್ದಾರೆ ಇದು ಅಧಿಕಾರ ಗಳಿಗೆ ಗೊತ್ತಿದ್ದರೂ ಕೂಡ ಯಾವದೇ ಕ್ರಮ ಕೈಗೊಳದೆ ಇರುವುದೇ ಸೋಚನಿಯ ಸಂಗತಿ ಆಗಿದೆ.

ಬಡವರ ಹೊಟ್ಟೆ ಮೇಲೆ ಹೊಡೆದು ದಂದೆ ನಡೆಸು ತ್ತಿರುವ ದಂದೆ ಕೊರರ ವಿರುದ್ಧ ಕ್ರಮ ಯಾವಾಗ….

ಸರಕಾರ ದ ಯಾವುದೇ ಯೋಜನೆ ಆಗಲಿ ಅದ್ದಕ್ಕೆ ನಿಷ್ಠಾವಂತ ವಾಗಿ ಅಧಿಕಾರಿ ಗಳು ಕೆಲಸ ಮಾಡಿದಾಗ ಮಾತ್ರ ಆ ಯೋಜನೆ ಸಂಪೂರ್ಣ ವಾಗುತ್ತದೆ ಆದರೆ ಇಲ್ಲಿ ನಡೆಯುತ್ತಿರುವುದು ನೋಡಿದರೆ ಅಧಿಕಾರಿ ಗಳೇ ಇವರಿಗೆ ಬೆಂಬಲ ನೀಡಿದ್ದಾರೆ ಏನೋ ಅನ್ನುವುದು ಅನುಮಾನ ಮೂಡುತ್ತಿದೆ.

ಕಾರಟಗಿ ತಾಲೂಕು ಗುಂಡೂರು ಗ್ರಾಮ ದ್ದಲ್ಲಿ ಆಕ್ರಮ ಪಡಿತರ ದಂದೆ ಹಾಡು ಹಗಲೇ ರಾಜ ರೋಷ ವಾಗಿ ನಡೆಯುತ್ತಿದೆ ಇದರ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಕ್ರಮ ಗೊಳ್ಳದೆ ಇರುವುದು ನೋಡಿದರೆ ಹಲವು ಅನುಮಾನ ಮೂಡುತ್ತಿವೆ.

ಅಧಿಕಾರಿಗಳು ದಂದೆ ಕೋರರು ಕೊಡುವ ಲಂಚಕ್ಕೆ ಕೈ ಚಾಚಿದ್ದಾರಾ ಅನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮಾಧ್ಯಮ ಗಳು ಹಲವು ಬಾರಿ ಇದರ ಬಗ್ಗೆ ಸುದ್ದಿ ಮಾಡಿದರು ಕೂಡ ಯಾವದೇ ಕ್ರಮ ಕೈಗೊಂಡಿಲ್ಲ ಯಾಕೆ? ದಂದೆ ಕೋರರು ಅಷ್ಟೊಂದು ಪ್ರಭಾವಿ ಶಾಲಿಗಳ ಅಧಿಕಾರಿ ಗಳ ಮೇಲೆ ಕ್ರಮ ಕೈ ಕೊಳ್ಳದೆ ಇರಲು ಒತ್ತಡ ಹಾಕುತ್ತಿದ್ದಾರಾ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಮಾತು.

ಗುಂಡೂರು ಗ್ರಾಮದ ಗ್ರಾಮ ಲೆಕ್ಕಧಿಕಾರಿಗಳ ಕಾರ್ಯಾಲಯ ಮುಂದೆ ದಿನ ನಿತ್ಯ ಅಕ್ರಮ ಪಡಿತರ ತುಂಬಿಕೊಂಡು ವಾಹನ ಗಳು ಹೋಡಾಡುತ್ತಿವೆ ಆದರೂ ಕೂಡ ಕ್ರಮ ಇಲ್ಲ ಯಾಕೆ ಅನ್ನುವುದು ಅಲ್ಲಿನ ಸ್ಥಳೀಯರ ಮಾತು.

ಈ ವಿಷಯ ಕ್ಕೆ ಅನೇಕ ಸಂಘಟನೆ ಗಳು ಸಾರ್ವಜನಿಕ ರು ಸಾಕಷ್ಟು ಸಲ ದೂರು ಗಳು ನೀಡಿದರೆ ಅಧಿಕಾರಿ ಗಳು ದಂದೆ ಕೊರರಿಗೆ ಫೋನ್ ಮುಖಾಂತರ ದೂರು ಬಂದಿದೆ ನಾವು ಬರುತ್ತೇವೆ. ಅಲ್ಲಿ ಏನು ಇಲ್ಲ ದಂತೆ ಅಕ್ಕಿ ಯನ್ನು ಖಾಲಿ ಮಾಡಿ ಎಂದು ತಿಳಿಸುತ್ತಾರೆ. ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಮಲ್ಲೇಶ್ ಆರೋಪಿಸಿದ್ದಾರೆ.

ಈ ವಿಷಯ ವನ್ನು ಗಂಭಿರ ವಾಗಿ ಪರಿಗಣಿಸಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿ ಗಳು ಇವರ ವಿರುದ್ಧ ಕ್ರಮ ಕೈ ಗೋಳಬೇಕು ಎನ್ನುವುದು ಅಲ್ಲಿನ ಸಾರ್ವಜನಿಕ ಕರು ಮತ್ತು ಸಂಘಟನೆಯವರು ಒತ್ತಾಯಿಸಿದ್ದಾರೆ ಕ್ರಮ ಕೈಗೊಳ್ಳದೆ ನಿರ್ಲಕ್ಷೆ ತೋರಿದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ನಮ್ಮ ಸಂಘಟನೆಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು

error: Content is protected !!