
ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಲು ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಹಿರಿಯ ನಾಯಕ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆದಿದೆ.
ಈ ವೇಳೆ ಸವದಿ ಕಾಂಗ್ರೆಸ್ ನಾಯಕರಿಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.
ಸವದಿ ಷರತ್ತುಗಳು..!
ತಮ್ಮ ಪುತ್ರ ಚಿದಾನಂದ ಸವದಿಗೆ ಅಥಣಿಯಿಂದ ಟಿಕೆಟ್ ನೀಡಬೇಕು
ಮಗನಿಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ನಿಂದ ಯಾರೂ ಬಂಡಾಯ ಏಳಬಾರದು
ಮೇಲಿನ ಎರಡು ಷರತ್ತುಗಳನ್ನು ಕಾಂಗ್ರೆಸ್ ನಾಯಕರ ಮುಂದೆ ಇಟ್ಟು ಮಧ್ಯಾಹ್ನ 2 ಗಂಟೆಯೊಳಗಾಗಿ ನಿರ್ಧಾರ ತಿಳಿಸುವಂತೆ ಗಡುವು ನೀಡಿದ್ದಾರೆ. ಸವದಿ ಬೇಡಿಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ನಿಂದ ಬೆಳಗಾವಿ ಜಿಲ್ಲಾ ನಾಯಕರ ಜೊತೆ ಸತೀಶ್ ಜಾರಕಿಹೊಳಿ ಜೊತೆ ಚರ್ಚಿಸುವಂತೆ ಹೇಳಿದೆ. ಸವದಿ ಅವರ ಈ ಷರತ್ತುಗಳಿಂದ ಬೆಳಗಾವಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ.