ಗಂಗಾವತಿ: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಕ್ಷೇತ್ರದಲ್ಲಿ ಏ.18ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಆರ್ ಚನ್ನಕೇಶವ ಹೇಳಿದರು.

ನಗರದ ಪಂಪಾನಗರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆ ನಡೆಸಿ ಮಾತನಾ ಡಿದರು.

ಚುನಾವಣೆ ನಾಮಪತ್ರ ಸಲ್ಲಿಕೆಗೆ ಕ್ಷೇತ್ರದ ಎಲ್ಲ ಜೆಡಿಎಸ್ ಕಾರ್ಯಕ ರ್ತರು, ಅಭಿಮಾನಿಗಳು ಸೇರಿ 10-15 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಪಕ್ಷದ ಪ್ರಣಾ ಳಿಕೆ, ಸಾಧನೆ ತಿಳಿಸಿ ಮತದಾನ ನೀಡುವಂತೆ ಮನವಿ ಮಾಡುತ್ತಿದ್ದು, ಜನರು ಸಕಾರಾತ್ಮಕವಾಗಿ ಬೆಂಬಲ ನೀಡು ತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಿಜೆಪಿ, ಕೆಆರ್‌ಪಿಪಿಯಂತೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವಂತೆ ನನ್ನ ತಂದೆಯವರ ಆಶೀರ್ವಾದ ಪಡೆದಿದ್ದೇನೆ ಎಂದರು. ಮುಖಂಡರಾದ ಪಾಡುಗುತ್ತಿ ಅಕ್ತರ ಸಾಬ್, ಶೇಖನಬಿಸಾಬ್ ಸೇರಿ ಕಾರ್ಯಕರ್ತರು ಇದ್ದರು.

error: Content is protected !!