ಲಬುರ್ಗಾ: ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಎನ್.ಜರಕುಂಟೆ ಗ್ರಾಮದಲ್ಲಿ ಅನುಮತಿ ಪಡೆಯದೇ ಸೋಮವಾರ ರಾತ್ರಿ 250 ಜನರಿಗೆ ಬಾಡೂಟ ವ್ಯವಸ್ಥೆ ಮಾಡಿದ್ದ ಆರೋಪದ ಮೇಲೆ ಗ್ರಾಮದ ಶರಣಗೌಡ ಪೊಲೀಸ್‌ಪಾಟೀಲ (55) ಎಂಬುವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

‘ಬಾಡೂಟದ ಸ್ಥಳಕ್ಕೆ ದಾಳಿ ನಡೆಸಿ, ₹7,430 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಆಮಿಷವೊಡ್ಡಿ ಶರಣಗೌಡ ತಮ್ಮ ಜಮೀನಿನಲ್ಲಿ ಬಾಡೂಟದ ವ್ಯವಸ್ಥೆ ಮಾಡಿದ್ದರು.

ಚುನಾವಣಾಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದರು. ಆದರೆ, ಯಾರು ಅಭ್ಯರ್ಥಿ ಎಂಬುದನ್ನು ಶರಣಗೌಡ ಬಹಿರಂಗಪಡಿಸಲಿಲ್ಲ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಬೇವೂರ ಠಾಣೆ ಪೊಲೀಸರು ತಿಳಿಸಿದ್ದಾರೆ.

error: Content is protected !!