ರಾಯಚೂರು: ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಬೆಂಬಲಿಗರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಅಂದ್ರೂನ್ ಖಿಲ್ಲಾ ಬಡಾವಣೆಯಲ್ಲಿ ನಡೆದಿದೆ.

ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ ಆರಿಫ್ ಹಾಗೂ ಕಾರ್ಪೊರೇಟರ್ ತಿಮ್ಮಾರೆಡ್ಡಿ ಆಪ್ತ ಮೊಹಮ್ಮದ್ ನಡುವೆ ಜಗಳ ಆರಂಭವಾಗಿ ಇಬ್ಬರೂ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾರಾಮಾರಿಯಲ್ಲಿ ಬಿಜೆಪಿ ಮುಖಂಡನ ಬೆಂಬಲಿಗ ಆರಿಫ್ ನ ಮೂರು ಬೆರಳುಗಳು ತುಂಡಾಗಿವೆ. ಕಾಂಗ್ರೆಸ್ ಮುಖಂಡ ಮೊಹಮ್ಮದ್ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!