ಕೊಪ್ಪಳ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾಚಣೆ-2023ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಒಟ್ಟು 83 ಪ್ರಕರಣಗಳು ದಾಖಲಾಗಿವೆ.
ಮಾರ್ಚ 29 ರಿಂದ ಏಪ್ರೀಲ್ 09ರವರೆಗೆ ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರಾದ ಸೆಲೀನಾ ಸಿ ಅವರ ನೇತೃತ್ವದಲ್ಲಿ, ಘೋರ-22, ಸಾಮಾನ್ಯ-12 ಹಾಗೂ ಕಲಂ15(ಎ)-49, ಒಟ್ಟು 83 ಪ್ರಕರಣಗಳು ದಾಖಲಾಗಿ ಸುಮಾರು 452.490 ಲೀಟರ್ ಮದ್ಯ, ಬಿಯರ್-17.900 ಲೀಟರ್ ಹಾಗೂ 18 ದ್ವಿಚಕ್ರ ವಾಹನಗಳನ್ನು ಜಪ್ತುಪಡಿಸಿಕೊಂಡು ಒಟ್ಟು 12 ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಲ್ಲಾ ಪ್ರಕರಣಗಳಲ್ಲಿ ಜಪ್ತುಪಡಿಸಿದ ಮುದ್ದೆಮಾಲು ಹಾಗೂ ವಾಹನಗಳ ಒಟ್ಟು ಅಂದಾಜು ಮೌಲ್ಯ ರೂ. 9,17,556 ಗಳಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.