ಗಂಗಾವತಿ: 11 ಮನೆಗಳ್ಳತನ ಪ್ರಕರಣದಲ್ಲಿ ಕಳ್ಳನೊರ್ವನನ್ನು ನಗರಠಾಣೆಯ ಪೊಲೀಸರು ಬಂಧಿಸಿದ್ದಾರೆ. 81 ಗಾಂ ತೂಕದ ಅಂದಾಜು 4 ಲಕ್ಷ ರೂ ಮೌಲ್ಯದ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿ ಆರೋಪಿ ಹನುಮೇಶ ಕನಕಗಿರಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

11 ಪ್ರಕರಣಗಳನ್ನು ಬೇಧಿಸಿದ ಗಂಗಾವತಿ ನಗರ ಠಾಣೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.

ಎಸ್ಪಿ ಯಶೋಧ ವಂಟಗೋಡಿ ನಿರ್ದೇಶನದಂತೆ ಡಿಎಸ್ಪಿ ಶೇಖರಪ್ಪ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಪಿಐ ಅಡಿವೇಶಪ್ಪ, ಎ.ಎಸ್ ಗುದಿಗೊಪ್ಪ ,ಕಾಮಣ್ಣ ಸಿಬ್ಬಂದಿಗಳಾದ ಚಿರಂಜೀವಿ, ವಿಶ್ವನಾಥ, ಮುಠಾಂತಗೌಡ,ರಾಘವೇಂದ್ರ, ಸುಭಾಷ , ದೇವೇಂದ್ರ, ಮೈಲಾರಪ್ಪ ತಂಡದವರು ಪ್ರಕರಣ ಬೇಧಿಸಿದ್ದಾರೆ.

error: Content is protected !!