ಚಿತ್ರದುರ್ಗ :ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ, ಚಿತ್ರದುರ್ಗ ಜಿಲ್ಲಾ ಸಮಿತಿ ಇವರ ವತಿಯಿಂದ ನ್ಯಾ. ಎ ಜೆ ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯಿಸಿ.
ದಿನಾಂಕ 11/12/2018 ರಂದು ಬೆಳಗ್ಗೆ 12 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಾನು ಸೋತದ್ದು ಸದಾಶಿವ ಆಯೋಗ ವರದಿ ಜಾರಿ ಮಾಡದ ಕಾರಣ.
ಬಿಜೆಪಿ ಯವರು ಸಿರ ಉಪಚುನಾವಣೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಘೋಷಣೆ ಮಾಡಿದ್ದರು.
ಜಾತ್ಯತೀತ ಜೆಡಿಎಸ್ ಪಕ್ಷದ ಕುಮಾರಸ್ವಾಮಿಯವರು ಅವರ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತವೆ ನನಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಪ್ರಕಟಣೆ ಮಾಡಿದ್ದರು.
ಈ ಮೂರು ಪಕ್ಷದವರು ಕಳ ಸಮುದಾಯದವರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಆದಕಾರಣ ನಾವೇ ಪರಿಶಿಷ್ಟ ಜಾತಿಯಲ್ಲಿ ಹೆಚ್ಚಾಗಿರುವ ಮಾದಿಗರು ಸದಾಶಿವ ಆಯೋಗ ವರದಿ ಜಾರಿಯಾಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಈ ಸದಾಶಿವ ಆಯೋಗ ವರದಿಯನ್ನು ಯಾವುದೇ ಪಕ್ಷದವರು ವಿರೋಧ ಮಾಡುತ್ತಾರೋ ಅಂಥವರ ವಿರುದ್ಧ ನಾವು ಮನೆ ಮನೆ ಮತ ಚಲಾವಣೆ ಮಾಡುತ್ತೇವೆ.
ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ರಾಜಣ್ಣ ತುರುವನೂರು ಈ ಸಭೆಯನ್ನು ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಎಲ್ಲಾ ಮುಖಂಡರುಗಳು ಇದ್ದರು