ಇದೆ ತಿಂಗಳ 8 ರಂದು ಶ್ರೀನಿವಾಸಪುರ ತಾಲ್ಲೂಕು ಬಂದ್‌ಗೆ ಕರೆ ನೀಡಲಾಗಿದೆ. ಇಂದು ಶ್ರೀನಿವಾಸಪುರದಲ್ಲಿ ಸಭೆ ಸೇರಿದ ಮಾವು ಬೆಳೆಗಾರರು ಬೃಹತ್ ಪ್ರತಿಭಟನೆಯನ್ನ ಮಾಡಿ ಬಂದ್ ಗೆ ಕರೆ ನೀಡಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಾವು ಬೆಳೆಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಮಾವು ಬೆಳೆಗಾರರ ಸಂಯುಕ್ತ ಯೋರಾಟ ಸಮಿತಿ ವತಿಯಿಂದ ಬಂದ್ ಗೆ ಕರೆ ನೀಡಲಾಗಿದೆ.
ಫಸಲ್ ಭೀಮಾ ಯೋಜನೆಯಡಿ ಖಾಸಗಿ ಕಂಪನಿಗಳಿಗೆ ವಿಮೆ ಹಣ ಕಟ್ಟಿರುವ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ, ಕೇಂದ್ರ ಸರ್ಕಾರದ ಫಸಲ್ ಭೀಮಾ ಹೋಜನೆ ಕೆಲ ಖಾಸಗೀ ವಿಮಾ ಕಂಪನಿಗಳು ಹಿಡಿತದಲ್ಲಿದೆ, ಇನ್ಸುರೆನ್ಸ್ ಕಟ್ಟಿದ ರೈತರಿಗೆ ೦% ತೋರಿಸಿ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರಗಳೇ ನೇರವಾಗಿ ವಿಮೆ ಕಟ್ಟಿಸಿಕೊಂಡು ನಷ್ಟ ಪರಿಹಾರ ನೀಡಬೇಕು, 6065 ಎಕರೆ ಪ್ರದೇಶದಲ್ಲಿ ವಿಮೆ ಕಟ್ಟಲಾಗಿದೆ, ಆದ್ರೆ ಇದುವರೆಗೂ 1500 ಎಕರೆ ಯಷ್ಟು ಸಹ ಬೆಳೆ ನಷ್ಟದ ವಿಮೆ ಬಂದಿಲ್ಲ ಅನ್ನೋದು ಮಾವು ಬೆಳೆಗಾರರ ಒತ್ತಾಯ ಪರಿಣಾಮ
ಡಿ.8 ರಂದು ಶ್ರೀನಿವಾಸಪುರ ಬಂದ್ ಮಾಡಿ ರೈತರಿಗೆ ನ್ಯಾಯ ಒದಗಿಸುವಂತೆ ಮಾವು ಬೆಳೆಗಾರರು ಒತ್ತಾಯ ಮಾಡಿದ್ದಾರೆ. ಅದರಂತೆ ಮಾವು ಬೆಳೆಗಾರರು ಮತ್ತು ವಿವಿಧ ರೈತಪರ, ಕನ್ನಡಪರ, ದಲಿತ ಪರ ಹಾಗೂ ಎಲ್ಲಾ ಜನಪರ ಸಂಘಟನೆಗಳ ಮುಖಂಡರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.