ಕೋಪ್ಪಳ: ಗಂಗಾವತಿ ಜನ ಫುಟ್ಬಾಲ್ (FootBall) ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳುತ್ತಾರೆ ಎಂದು ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಬಗ್ಗೆ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ (Iqbal Ansari) ವ್ಯಂಗ್ಯವಾಡಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ (Janardhan Reddy) ತೆಗೆದುಕೊಂಡ ಚಿಹ್ನೆ ಬರೋಬ್ಬರಿ ಸೂಟ್ ಆಗಿದೆ. ಗಂಗಾವತಿ ಜನ ಇಲ್ಲಿ ಫುಟ್ಬಾಲ್ ಆಡಿದರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ ಎಂದು ಟೀಕಿಸಿದರು.

ಬಳ್ಳಾರಿಯಲ್ಲಿ ಏನು ಮಾಡಲಾರದೆ ಅವರು ಇಲ್ಲಿಗೆ ಬಂದಿದ್ದಾರೆ. ಇಲ್ಲಿ ಅದೇನ್ ಕಡೆದು ಕಟ್ಟೆ ಹಾಕ್ತಾರೋ. ಜನಾರ್ದನ ರೆಡ್ಡಿ ಇಲ್ಲಿ ಚುನಾವಣೆಗೆ ಬಂದಿದ್ದಾರೆ ಅಷ್ಟೆ. ಚುನಾವಣೆ ಮುಗಿದ ನಂತರ ಸಂಜೆನೆ ಅವರು ಹೊರಟು ಹೋಗುತ್ತಾರೆ. ಅನ್ಸಾರಿ ಭಾಷಣ ಕೆಳಿ ಕಾರ್ಯಕರ್ತರು ನಗೆಗಡಲಲ್ಲಿ ತೇಲಾಡಿದರು.

ನೀತಿಸಂಹಿತೆ ಇರುವುದರಿಂದ ಉಪವಾಸ ಸಭೆ ಮಾಡಬೇಕಾಗಿದೆ. ಚುನಾವಣೆ ಮುಗಿಯುವ ತನಕ ಉಪವಾಸ ಇರೋಣ. ನಂತರ ನೂರು ಎಕರೆ ಹೊಲದಲ್ಲಿ ಬಿರಿಯಾನಿ ತಿನ್ನೋಣ ಎಂದರು.

error: Content is protected !!