
ಗಂಗಾವತಿ :ಗಂಗಾವತಿ ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿ ಹೊಲ ವಾಯು ವಿಹಾರ ಮಾಡುವವರನ್ನು ಪ್ರತಿಯೊಬ್ಬರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.
ಮತಯಾಚನೆ ಮಾಡುತ್ತಾ ಮಾತನಾಡಿದ ಅವರು ವಾಯು ವಿಹಾರಕ್ಕೆ ಅವಶ್ಯಕತೆ ಇರುವ 113 ಪಾರ್ಕುಗಳು ಗಂಗಾವತಿಯಲ್ಲಿ ಇರುವುದಾಗಿ ನಗರಸಭೆಯಿಂದ ಮಾಹಿತಿ ಹಕ್ಕು ಅರ್ಜಿ ಅಡಿ ಉತ್ತರ ಸಿಕ್ಕಿದೆ, ಆದರೆ ಬಹಳಷ್ಟು ಪಾರ್ಕುಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಸ್ವಂತ ಉಪಯೋಗಕ್ಕೆ ಬಳಸುತ್ತಿದ್ದಾರೆ, ಹೀಗಾಗಿ ವಾಯು ವಿಹಾರಕ್ಕೆ ಗಂಗಾವತಿಗೆ ಜೂನಿಯರ್ ಕಾಲೇಜ್ ಗ್ರೌಂಡ್ ಒಂದೇ ಮೂಲವಾಗಿದೆ ಆದ್ದರಿಂದ ಪೊರಕೆ ಗುರುತಿಗೆ ಮತ ಹಾಕುವ ಮೂಲಕ ಬೆಂಬಲಿಸಿ, ವಾಯುವಿಹಾರದ ಜಾಗಗಳನ್ನು ತೆರವುಗೊಳಿಸಿ ಜನರ ಉಪಯೋಗಕ್ಕೆ ಒದಗುವಂತೆ ಮಾಡೋಣ “ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಾಯು ವಿಹಾರಕ್ಕೆ ಬಂದಿದ್ದ ಪ್ರತಿಯೊಬ್ಬರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ರವರಿಗೆ “ಸಾಮಾನ್ಯರು ರಾಜಕೀಯದಲ್ಲಿ ಬಂದು ಅಧಿಕಾರವನ್ನು ಹಿಡಿದುಕೊಂಡು ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸಬೇಕಾಗಿದೆ ಈ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ “ಎಂದು ತಿಳಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಇತರೆ ಮುಖಂಡರಾದ ವೆಂಕಟೇಶ್, ಮನೀಶ್, ಶಿವರಾಜ್ ದೊಡ್ಡಬಸಪ್ಪ ಇದ್ದರು.