
ಕೊಪ್ಪಳ :ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ನಿಮಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ನ್ಯಾಯಸಮ್ಮತವಾಗಿ, ಶಾಂತಿಯುತವಾಗಿ ನಡೆಯಲು ದಿನಾಂಕ 05-04-2023 ರಂದು ಪಥಸಂಚಲನವನ್ನು.
ಕೊಪ್ಪಳ ನಗರದ ಬಸನಿಲ್ದಾಣದಿಂದ ಪ್ರಾರಂಭಗೊಂಡು, ಅಶೋಕ ವೃತ್ತ, ಜವಾಹರ ರಸ್ತೆ ಮೂಲಕ ಗಡಿಯಾರ ಕಂಭ, ಸಾಲಾರಜಂಗ ರಸ್ತೆ ಮೂಲಕ ಈಶ್ವರ ಪಾರ್ಕ ವರೆಗೆ ನಡೆಸಲಾಯಿತು.

ಪಥಸಂಚಲನದಲ್ಲಿ ಶ್ರೀ ಸುಂದರೇಶ ಬಾಬು ಜಿಲ್ಲಾಧೀಕಾರಿಗಳು ಕೊಪ್ಪಳ, ಶ್ರೀಮತಿ. ಯಶೋಧ ಎಸ್. ವಂಟಗೋಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಶ್ರೀ. ರಾಹುಲ್ ರತ್ನಂ ಪಾಂಡೆ ಸಿ.ಇ.ಓ. ಜಿಲ್ಲಾ ಪಂಚಾಯತ ಕೊಪ್ಪಳ ಕೊಪ್ಪಳ ರವರ ನೇತೃತ್ವದಲ್ಲಿ ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಪ್ಯಾರಾ ಮಿಲಿಟರಿ ತುಕಡಿ ಮತ್ತು ಕೊಪ್ಪಳ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿರವರು ಭಾಗವಹಿಸಿದ್ದರು.