,ಗಂಗಾವತಿ: ಗಂಗಾವತಿ ನಗರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಗೆ ಮೂಲಭೂತ ಸೌಕರ್ಯಗಳ ಒದಗಿಸಬೇಕು ಎಂದು ಎಬಿವಿಪಿ ಸಂಘಟನೆಯಿಂದ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು. ನಂತರ ಮಾತನಾಡಿ ಎಬಿವಿಪಿ ಸಂಘಟನೆಯ ಮುಖಂಡ ಸರ್ವಜ್ಞ ಮೂರ್ತಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಅಭ್ಯಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳವ ಕನಸುಗೆ ತಣ್ಣೀರು ಎರಿಚಿದೆ ಸರ್ಕಾರ.ಬೆಂಚ್,ಉಪನ್ಯಾಸಕರ ಕೊರತೆ, ಮೂಲಭೂತ ಸೌಕರ್ಯಗಳ ಇದೆ.ತಕ್ಷಣ ಸರ್ಕಾರ ಮತ್ತು ಇಲಾಖೆಯ ಸಚಿವರು ಇತ್ತ ಗಮನಿಸಿ, ಬಡವರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಭ್ಯಾಸ ಮಾಡುತ್ತಿದ್ದು.ಇಂತಹ ಕಾಲೇಜು ಗಳಿಗೆ ಸೌಕರ್ಯಗಳ ಒದಗಿಸಿ ಕೊಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗಾಳೇಶ ದಂಡಿನ್,ಕೌಸ್ತಬ್,ಅಂಜಿನೇಯ, ವಿದ್ಯಾರ್ಥಿಗಳು ಭಾಗವಹಿಸಿದ್ದರು.


