ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ
ಇಂದು ಪಟ್ಟಣದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಿವಿಜಿ ಭಾವಚಿತ್ರೆಕ ಪುಷ್ಪನಮನ ಸಲ್ಲಿಸಿ ನಂತರ ದೀಪಾ ಬೆಳಗಿಸಿ ಉದ್ಘಾಟಿಸಿ ಮಾತಾನಡಿದ ಅವರು, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸರಿದಾರಿಗೆ ತರುವ ಮಹತ್ವದ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಸಮಾಜದ ಸುದ್ದಿ ಸಮಾಚಾರಗಳನ್ನು ಸೂಕ್ತವಾಗಿ ನೇರ,ದಿಟ್ಟತನದಿಂದ ನಿಷ್ಠುರವಾಗಿ ಜನರಿಗೆ ತಲುಪಿಸುವ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಪತ್ರಿಕಾ ರಂಗದಿದ ಮಾತ್ರ ಸಾಧ್ಯ. ಈ ರಂಗಲ್ಲಿ ಕೆಲಸ ಮಾಡುವ ಪತ್ರಕರ್ತರು ಅಹಂಕಾರ ಬಿಟ್ಟು ಪಕ್ಷತೀತವಾಗಿ ಭೇದಭಾವ ಬಿಟ್ಟು ನಿಷ್ಠೆಯಿಂದ ಕೆಲಸ ಮಾಡಬೇಕಿದೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳು ಹೇಳಿದರು.

ನಂತರ ಮಾದಿಗ ಮಹಾಸಭದ ಜಿಲ್ಲಾ ಅಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಸ್ಮರಣೆಯೊಂದಿಗೆ ಪತ್ರಕರ್ತರ ಪದಗ್ರಹಣ ಸಮಾರಂಭ ಸಮಾಜಕ್ಕೆ ಒಂದು ಉತ್ತಮ ಸಂದೇಶವಾಗಿದೆ. ಸಮಾಜದಲ್ಲಿನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ದಾರಿತಪ್ಪಿದಾಗ ಅದನ್ನು ಎತ್ತಿಹಿಡಿದು ಸರಿದಾರಿಗೆ ತರುವ ಕಾರ್ಯ ಪತ್ರಿಕಾ ರಂಗ ಮಾಡುತ್ತದೆ ಅದ್ದರಿಂದ ಸಮಾಜದಲ್ಲಿ ಈ ರಂಗಕ್ಕೆ ವಿಶೇಷ ಸ್ಥಾನಮಾನ ಗೌರವವಿದೆ ಎಂದರು.


ನಂತರ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದಲ್ಲಿ ಪತ್ರರ್ತರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ಜೀವನ‌ ಭದ್ರತೆ, ಗೌರಧನ, ಆರ್ಥಿಕ ಭದ್ರತೆ ಇಲ್ಲದೆ ಅನೇಕ ಸಮಸ್ಯೆಗಳ ನಡುವೆ ಸಮಾಜದ ಒಳತಿಗಾಗಿ ಏಳಿತೆಗಾಗಿ ಶ್ರಮಿಸುತ್ತಿದ್ದಾರೆ. ಪತ್ರಕರ್ತರ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿ ಎತ್ತುವ ಉದ್ದೇಶದಿಂದ ರಾಜ್ಯದಲ್ಲಿ ಈ ಸಂಘಟನೆ ಹುಟ್ಟು ಹಾಕಲಾಗಿದೆ ಇದಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉತ್ತಮ ಸ್ಪಂದನೆ �

error: Content is protected !!