ಕೊಪ್ಪಳ :ಗಂಗಾವತಿ ನಗರದಲ್ಲಿ ಕೃಷ್ಣ ದೇವರಾಯ ವೃತ್ತಿದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಟಿ ಏ ನಾರಾಯಣ ಗೌಡ್ರ ಬಣದ ಗಂಗಾವತಿ ತಾಲೂಕು ಸಮಿತಿ ವತಿಯಿಂದ ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ B tv ವರದಿಗಾರ ಮೆಹಬೂಬ್  ಮನವಳ್ಳಿ ಇವರ ಮೇಲೆ ಕೊಲೆ ಆರೋಪ ಜೊತೆಗೆ ದೂರವಾಣಿ ಸಂಪರ್ಕ ಹೊಂದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಿರುವುದನ್ನು ಖಂಡಿಸಿ ಪೊಲೀಸ್ ಇಲಾಖೆಯಿಂದ ವಿರುದ್ಧ ತಾಹಸಿಲ್ದಾರ್ ಮುಖಾಂತರ ಆಗರ ಜ್ಞಾನೇಂದ್ರ ಇವರಿಗೆ ಮನವಿ ಸಲ್ಲಿಸಿ
ಯಮನೂರ ಭಟ್* ನಗರ ಘಟಕ ಅಧ್ಯಕ್ಷರು ಮಾತನಾಡಿ

ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಬಿಟಿವಿ B.Tv ವರದಿಗಾರರಾದ ಮೆಹಬೂಬ್‌ ಮುನವಳ್ಳಿ ಯವರನ್ನು ಕಳೆದ ವಾರ ಕೊಲೆ ಆರೋಪಿಗಳ ಜೊತೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದಾವಣಗೆರೆ ಜಿಲ್ಲೆ ನ್ಯಾಮತಿ ಪೋಲಿಸರು ಬಂಧಿಸಿರುವುದನ್ನು ವಿರೋಧಿಸಸುತ್ತೇವೇ . BTV ವರದಿಗಾರನಾದ ಮೆಹಬೂಬ್‌ ಮುನವಳ್ಳಿ ರವರಿಗೆ ಆದ ಅನ್ಯಾಯವನ್ನು ಪುನರ್ ಪರಿಶೀಲಿಸಿ ಸೂಕ್ತ ನ್ಯಾಯಕ್ಕಾಗಿ ಮನವಿ ಮತ್ತು ರಾಜ್ಯದಲ್ಲಿ ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆಯಾಗುದ್ದು, ಪತ್ರಕರಿಗೆ ಸೂಕ್ತವಾದ ರಕ್ಷಣೆಯನ್ನು ನೀಡಬೇಕು ಮತ್ತು ಸಕಾರದ ಗಮನಕ್ಕೆ ಬಂದಿದ್ದರೂ ಸಹಿತ ಹಲ್ಲೆಮಾಡಿದವರ ವಿರುದ್ಧ ಪೋಲೀಸ್ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಸೋಚನಿಯ ವಿಷಯವಾಗಿದೆ. ಹಾಗೂ ಈ ಘಟನೆಗೆ ಸಂಬಂದಿಸಿದಂತೆ ಪೋಲೀಸ್ ಇಲಾಖೆಯ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಮತ್ತು ಮಹೇಬೂಬ ಇವರನ್ನು  ನ್ಯಾಯಾಂಗದಿಂದ ಬಿಡುಗಡೆಗೊಳಿಸುವಂತೆ ಮತ್ತು ಇವರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿಮಾಡಿಕೊಳುತ್ತೆವೆ ಎಂದು ಹೇಳಿದರು ಒಂದುವೇಳೆ ತಾವುಗಳು ಪೋಲೀಸ್ ಇಲಾಖೆಯ ಮೇಲೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನದಲ್ಲಿ ಪೋಲೀಸ್ ಇಲಾಖೆ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಗೌಡರ ಬಣ) ತಾಲೂಕ ಸಮಿತಿ ಗಂಗಾವತಿ, ವತಿಯಿಂದ  ರಾಜ್ಯಾದ್ಯಾಂತ ಬೃಹತ್ ಮಟ್ಟದಲ್ಲಿ  ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಒಂದು ಮನವಿ ಪತ್ರದ ಮೂಲಕ ಈ ಪ್ರಕರಣಕ್ಕೆ ಸಂಬಂಧಪಟ್ಟ ಪೋಲೀಸ್‌ ಇಲಾಖೆಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೇ ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತ ಸಲಹೆಗಾರರಾದ ಚನ್ನಬಸವ ಮಾನ್ವಿ ಹಾಗೂ ತಾಲೂಕು ಯುವ ಘಟಕ ಅಧ್ಯಕ್ಷರಾದ ಹುಲಿಗೇಶ್ ಕೊಜ್ಜಿ ಹಾಗೂ ರಾಮಕೃಷ್ಣ ಸಿ ಡಿ ಹಾಗೂ ಇನ್ನಿತರ ಮುಖಂಡರುಗಳು ಭಾಗಿಯಾಗಿದ್ದರು

error: Content is protected !!