ಕೊಪ್ಪಳ :ಗಂಗಾವತಿ ತಾಲೂಕು ಸಮಿತಿ ಯಿಂದ ಗಂಗಾವತಿ ನಗರದಲ್ಲಿ ಇಂದು ಪ್ರತಿಭಟನೆ ಮಾಡಲಾಯಿತು.ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಬಿಟಿವಿ ವರದಿಗಾರ ಮಹೇಬೂಬ್ ಮನವಳ್ಳಿ ಇವರ ಮೇಲೆ ಕೊಲೆ ಆರೋಪ ಜೊತೆಗೆ ದೂರವಾಣಿ ಸಂಪರ್ಕ ಹೊಂದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂದಿಸಿರುವುದು ಪೋಲೀಸ್ ಇಲಾಖೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರಿಗೆ ನ್ಯಾಯ ಒದಗಿಸಿಕೊಡು ಎಂದು
ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಸಮಿತಿ ಗಂಗಾವತಿ ವತಿಯಿಂದ  ಖಂಡಿಸಿ ಪ್ರತಿಭಟನೆ.

ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ  B.Tv ವರದಿಗಾರರಾದ ಮೆಹಬೂಬ್‌ ಮುನವಳ್ಳಿ ಯವರನ್ನು ಕಳೆದ ವಾರ ಕೊಲೆ ಆರೋಪಿಗಳ ಜೊತೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದಾವಣಗೆರೆ ಜಿಲ್ಲೆ ನ್ಯಾಮತಿ ಠಾಣೆಯ ಪೋಲಿಸರು ಬಂಧಿಸಿರುವುದನ್ನು ವಿರೋಧಿಸಿ ಈ ಘಟನೆಯನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಸಮಿತಿ ಗಂಗಾವತಿ ವತಿಯಿಂದ ಮಾನ್ಯ ರಾಜ್ಯಪಾಲರಿಗೆ ತಲುಪುವಂತೆ ಮಾನ್ಯ ತಹಶೀಲ್ದಾರರು ಗಂಗಾವತಿ ಇವರ ಮುಖಾಂತರ ಮನವಿ ಸಲ್ಲಿಸುತ್ತಿದ್ದೇವೆ, B.TV ವರದಿಗಾರನಾದ ಮೆಹಬೂಬ್ ಮುನವಳ್ಳಿ ರವರಿಗೆ ಆದ ಅನ್ಯಾಯವನ್ನು ಪುನರ್ ಪರಿಶೀಲಿಸಿ ಸೂಕ್ತ ನ್ಯಾಯಕ್ಕಾಗಿ ಮನವಿ, ಹಾಗೂ ಈ ಘಟನೆಗೆ ಸಂಬಂದಿಸಿದಂತೆ ಪೊಲೀಸ್ ಇಲಾಖೆಯ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ ಮಹೇಬೂಬ ಇವರಿಗೆ ನ್ಯಾಯವನ್ನು ಒದಗಿಸಿಕೊಡಲು ಮನವಿ, ಒಂದುವೇಳೆ ತಾವುಗಳು ಪೋಲೀಸ್‌ ಇಲಾಖೆಯ ಮೇಲೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನದಲ್ಲಿ ಪೋಲೀಸ್ ಇಲಾಖೆಯ ಮುಂದೆ ಕಾರ್ಯನಿರತ ಪತ್ರಕರ್ತದ ಧ್ವನಿ ವತಿಯಿಂದ ರಾಜ್ಯಾದ್ಯಾಂತ ಬೃಹತ್ ಮಟ್ಟದಲ್ಲಿ ಧರಣಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮನವಿ ಪತ್ರದ ಮೂಲಕ ಪೋಲೀಸ್ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಪ್ರತಿಭಟನೆಗೆ ಸಂಘಟನೆಗಳು ಕೂಡ ಬೆಂಬಲವನ್ನು ನೀಡಿದ್ದವು. ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ, ಸರ್ವಾಂಗೇಣ ಹೋರಾಟ ಸಮಿತಿ ಈ  ಸಂಘಟನೆಗಳು ಕೂಡ ಬೆಂಬಲವನ್ನು ನೀಡಿದವು

ಈ ಸಂದರ್ಭದಲ್ಲಿ ಎಂ.ಡಿ.ಸೈಯದ್ ಆಲಿ. ತಾಲೂಕ ಅಧ್ಯಕ್ಷರು ಆರ್.ಚನ್ನಬಸವ ಮಾನ್ವಿ,ತಾಲೂಕ ಉಪಾಧ್ಯಕ್ಷರು  ನಾಗರಾಜ ಕೊಟ್ನೆಕಲ್, ಸದಸ್ಯರು
MD ಗೌಸ್,ಕಾರ್ಯದರ್ಶಿ ಚಂದ್ರಪ್ಪ ನಾಯಕ,ಸದಸ್ಯರು
ಕೃಷ್ಣ ತಾಲೂಕ ಖಜಾಂಚಿ,ನದೀಮ್ ಸದಸ್ಯರು.

error: Content is protected !!