
ಗಂಗಾವತಿ :ದಿನಾಂಕ 21.03.2023 ರಂದು ಬಿಜೆಪಿ ಯುವಮೋರ್ಚಾ ಕೊಪ್ಪಳ ಜಿಲ್ಲೆಯ ವತಿಯಿಂದ
ಯುವ ಸಂಕಲ್ಪ ಸಮಾವೇಶವನ್ನ ನಗರದ ಕನಕಗಿರಿ ರಸ್ತೆಯಲ್ಲಿರುವ ತಾಲೂಕ ಕ್ರಿಡಾಂಗಣದಲ್ಲಿ ಆಯೋಜಿಸಲಾಗಿದ್ದು
ರಾಜ್ಯದಿಂದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ ತೆಜಸ್ವಿ ಸೂರ್ಯ ಹಾಗೂ ರಾಜ್ಯ ಅಧ್ಯಕ್ಷರಾದ ಡಾ. ಸಂದೀಪ್ ಕುಮಾರ್ ಅವರು ಆಗಮಿಸಲಿದ್ದಾರೆ.
ನಗರದಲ್ಲಿ ಅಂದು ಆನೆಗುಂದಿಯ ಶ್ರೀ ಲಲಿತ್ ಮಹಲ್ ಹೊಟೆಲ್ ನಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ಕೃಷ್ಣದೇವರಾಯ ವೃತ್ತದಿಂದ , ಬಸವಣ್ಣ ಸರ್ಕಲ್ ನಿಂದ ಗಾಂದಿ ಚೌಕ್ ಮಾರ್ಗವಾಗಿ, ಮಹಾವೀರ ವೃತ್ತದಿಂದ ಸಿಬಿಎಸ್ ಮಾರ್ಗವಾಗಿ, ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿದೆ.

ಹಾಗೂ ಜಿಲ್ಲೆಯಿಂದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಎಲ್ಲಾ ಮಂಡಲದ ಯುವ ಮೋರ್ಚಾ ಪಧಾದಿಕಾರಿಗಳು , ನಗರಸಭೆ ಸದಸ್ಯರು, ಯುವ ಸಮೂಹ ಅಂದಾಜು 10 ಸಾವಿರ ಜನಸಂಖ್ಯೆ ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗುತ್ತದೆ ಎಂದು
ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು