
ಕೊಪ್ಪಳ :ಇಂದು ಗಂಗಾವತಿ ನಗರದ ಶ್ರೀ ಕೃಷ್ಣದೇವರಾಯ ಕಲಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಹಾಗೂ ವಸತಿ ಶಾಲೆಗಳ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳ ಸೇವಾ ಭದ್ರತೆಗಾಗಿ ಕನಿಷ್ಠ ವೇತನ ಜಾರಿ ಹಾಗೂ ಖಾಯಂ ನೌಕರನ್ನಾಗಿಸುವ
ಪ್ರಥಮ ಜಿಲ್ಲಾ ಸಮ್ಮೆಳನದ ಸಮಾವೇಶದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೆಟ್ಟಿ ಅವರು ಭಾಗವಹಿಸಿದ್ದರು,

ಶಾಸಕರು ಮಾತನಾಡಿ ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಸಮಾಲೋಚನೆ ನೆಡೆಸಿ ಬೇಡಿಕೆ ಈಡೆರುವ ಭರವಸೆ ನೀಡಿದರು.
ಈ ಸಮಯದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿ, ಅಮರೇಶ್ , ಚಂದ್ರಶೇಖರ ಹಾಗೂ ಸಂಘಟನೆಯ ಪಧಾದಿಕಾರಿಗಳು ಹಾಗೂ ಸಿ ಮತ್ತು ಡಿ ವೃಂದದ ನೌಕರರು ಉಪಸ್ಥಿತರಿದ್ದರು.