
ಕೋಪ್ಪಳ: ತಾಲ್ಲೂಕಿನ ಬೂದಗುಂಪಾ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾ. 5ರಂದು ಬೆಳಗಿನ ಜಾವ 154.50 ಕ್ವಿಂಟಲ್ ಅಕ್ಕಿ ಮೂಟೆಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರಾಬಾದ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಸ್ತೂರಿ ಕರ್ನಾಟಕ ಜನಪರ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೂಕನಪಳ್ಳಿ ಗ್ರಾಮದ ಪ್ರಶಾಂತ ಮಣ್ಣೂರ (24), ಫೈನಾನ್ಸ್ ಉದ್ಯಮದಲ್ಲಿ ತೊಡಗಿದ್ದ ಕೊಪ್ಪಳದ ಅಂಬೇಡ್ಕರ್ ನಗರದ ಗೌತಮ ಬಳಾಗನೂರ (28) ಮತ್ತು ತಾಲ್ಲೂಕಿನ ನೀರಲಗಿ ಗ್ರಾಮದ ವಿದ್ಯಾರ್ಥಿ ಗವಿ ಹೂಗಾರ (23) ಬಂಧಿತರು.
ಆರೋಪಿಗಳಿಂದ ₹1.5 ಲಕ್ಷ ನಗದು, ₹2 ಲಕ್ಷ ಮೌಲ್ಯದ 80 ಕ್ವಿಂಟಲ್ ತೂಕದ 100 ಅಕ್ಕಿ ಮೂಟೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ಟೊಯೊಟೊ ಇನೊವಾ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.