
ಬೆಂಗಳೂರು: ವೇತನ ಪರಿಷ್ಕರಣೆ, ಖಾಯಂ ನೌಕರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದು, ಎಸ್ಮಾ ಜಾರಿಗೆ ಮುಂದಾಗಿದೆ.
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿಗಳು ಕೂಡಲೇ ಕತ್ಯವ್ಯಕ್ಕೆ ಹಾಜರಾಗಲು ಸೂಚನೆ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.
ಒಂದು ವೇಳೆ ಪ್ರತಿಭಟನೆ ಮುಂದುವರೆಸಿದರೆ ESMA ACT ಜಾರಿಗೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.
NHM ಒಳಗುತ್ತಿಗೆ ನೌಕರರನ್ನು ಈ ತನಕ ಯಾವ ರಾಜ್ಯದಲ್ಲೂ ಖಾಯಂಗೊಳಿಸಿಲ್ಲ. ಮಣಿಪುರ, ಅಸ್ಸಾಂ, ಪಂಜಾಬ್, ಹಿಮಾಚಲ್ ಪ್ರದೇಶ ಸೇರಿದಂತೆ ಯಾವ ರಾಜ್ಯಗಳಲ್ಲೂ NHM ನೌಕರರನ್ನು ಖಾಯಂ ಮಾಡಿಲ್ಲ ಎಂದು ಸೂಚನೆಯಲ್ಲಿ ಉಲ್ಲೇಖಿಸಿದೆ.
ಆರೋಗ್ಯ ಇಲಾಖೆ ತುರ್ತು ಸೇವೆ ಒದಗಿಸುವ ಇಲಾಖೆಯಾಗಿದೆ. ಹೀಗಾಗಿ NHM ನೌಕರರು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕರ್ತವ್ಯಕ್ಕೆ ಹಾಜರಾಗಲು ಆರೋಗ್ಯ ಇಲಾಖೆಯ ಆದೇಶ ಆದೇಶ ಹೊರಡಿಸಿದೆ.