
ಗಂಗಾವತಿ:ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಕೊಪ್ಪಳ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಹಯೋಗದೊಂದಿಗೆ.
ಶನಿವಾರ ರಂದು ವಿನಾಯಕ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ ಮಕ್ಕಳಿಗಾಗಿ ಆರೋಗ್ಯದ ಬಗ್ಗೆ ಸಲಹೆಯನ್ನು ತಾಲೂಕು ಶಿಕ್ಷಣ ವೈದ್ಯಾಧಿಕಾರಿಗಳಾದ ಆಶಾ ಬೇಗಂ ಸಂಪೂರ್ಣವಾಗಿ ಮಾಹಿತಿಯನ್ನುವಿಧ್ಯಾರ್ಥಿಗಳಿಗೆ ಪ್ರತಿಯೊಬ್ಬರೂ ಶಾಲೆಯಿಂದ ಮನೆಗೆ ಹೋದಾಗ ಕೈ ತೊಳೆದುಕೊಳ್ಳಬೇಕು ಹಾಗೂ ಊಟಕ್ಕೆ ಮೊದಲ ಹಾಗೂ ಶೌಚಾಲಯಯ ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳವ ವಿಧಾನವನ್ನು ನಾವು ನೀವು ಕಲೆಯಬೇಕು ಮತ್ತು ನಿಮ್ಮ ಉಗುರುಗಳನ್ನು ಇನ್ನೊಂದು ಹಸ್ತಕ್ಕೆ ತಾಕಿಸಿ ಉಜ್ಜಿರಿ ದಿನಾಲು ಸ್ನಾನ ಮಾಡಿದಮೇಲೆ ದೇವರಿಗೆ ನಮಸ್ಕರಿಸಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ದೇವರಲ್ಲಿ ಬೇಡಿಕೊಳಬೇಕು ಒಳ್ಳೆಯ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನು ಪಡೆದ್ರೇ ನಿಮ್ಮ ತಂದೆ ತಾಯಿಗೂ ಹಾಗೂ ಕಲಿಸಿದ ಶಿಕ್ಷಕರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಶ್ರೀನಿವಾಸ್ ನಾಯ್ಡು ದೈಹಿಕ ಶಿಕ್ಷಕರಾದ ಉಜ್ಜನಗೌಡ ಸಹ ಶಿಕ್ಷಕರುಗಳಾದ ಚನ್ನಬಸವ ರಾಮನಗೌಡ ಹಾಗೂ ಇತರ ಶಿಕ್ಷಕರು ಹಾಜರಿದ್ದರು