ಕೊಪ್ಪಳ :ಗಂಗಾವತಿ ನಗರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಶನಿವಾರದಂದು ಶ್ರೀ ಗ್ರಾಮದೇವತೆ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದಿಂದ ಗಂಗಾವತಿ ತಾಲೂಕು ಮಟ್ಟದಲ್ಲಿ ಇಂದು ಆಚರಣೆ ಮಾಡಲಾಯಿತು.

ಉದ್ಘಾಟಿಸಿ ಮಾತನಾಡಿದ ಸಾಹಿತ್ಯಗಳಾದ ಡಾ.ಶಿವಕುಮಾರ್ ಪಾಟೀಲ್ ಅವರು ಇಂದಿನ ಕಾಲದಲ್ಲಿ ಮಹಿಳೆಯರೆ ಮೇಲುಗೈಯಲ್ಲಿ ಸಾಧನೆ ಮಾಡಿದ್ದಾರೆ ಮಹಿಳೆಯರು ಪುರುಷರು ಸಮವಾಗಿ ಕೆಲಸವನ್ನು ಮಾಡುತ್ತಿದ್ದಾರೆ,ಮತ್ತು ಆಶಾ ಕಾರ್ಯಕರ್ತರು ಕೇವಲ 10 ನೇ ತರಗತಿ ಓದಿದ್ದರು ಕೂಡ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಮಹಿಳೆಯರು ಕೊಡಿಸುವ ಮೂಲಕ ಉನ್ನತ ಹುದ್ದೆಯಲ್ಲಿ ಆಶಾ ಕಾರ್ಯಕರ್ತರ ಮಕ್ಕಳು ಇದ್ದಾರೆ ಆದಕಾರಣ ಮಹಿಳೆಯರು ತಾಯಿ,ಅಕ್ಕ ತಂಗಿ ಎಂದು ದೇವರಿಗೆ ಹೊಲಿಗೆ ಮಾಡುತ್ತಾರೆ ಆದಕಾರಣ ಮಹಿಳೆಯರಿಗೆ ಗೌರವ ಕಾಣುವ ಕೆಲಸವನ್ನು ನಾವು ನೀವು ಮಾಡಬೇಕು ಎಂದು ಮಹಿಳೆ ದಿನಾಚರಣೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಯಾದ   ಮಂಜುಳಾ,ಆಶಾ ಕಾರ್ಯಕರ್ತೆ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಗಂಗಾವತಿ ತಾಲೂಕ ಅಧ್ಯಕ್ಷೆ ಎ ಜ್ಯೋತಿ ಲಕ್ಷ್ಮಿ ಅಯೋಧ್ಯ, ಆಶಾ ಕಾರ್ಯಕರ್ತರ ಸಂಘದ ತಾಲೂಕು ಗೌರವ ಅಧ್ಯಕ್ಷೆ ಶಾರದಾ, ಆಶಾ ಕಾರ್ಯಕರ್ತರಾದ  ದೇವಮ್ಮ,ಕೆ.ಲಲಿತಾ, ಯಲ್ಲಮ್ಮ, ಗೀತಾ, ಕಮಲಾ,  ಕಂತೆಮ್ಮ, ತುಳಸ ಶಾಂತಕುಮಾರಿ, ಸಂಗೀತ ಮತ್ತು ಆಶಾ ಸಂಘಟನೆಕಾರರು ಶರಣು ಪಾಟೀಲ್ ಸೇರಿದಂತೆ ಇತರರು ಇದ್ದರು

error: Content is protected !!