ಕೊಪ್ಪಳ :ಗಂಗಾವತಿ ತಾಲೂಕಿನ ನಲ್ಲಿ ಶ್ರೀ ವೀರಮಹೇಶ್ವರ ಜಂಗಮ ಸಂಘ ಹಾಗೂ ವೀರಶೈವ ಲಿಂಗಾಯತ ಸಮಾಜದಿಂದ ದಿನಾಂಕ 16ಮಾರ್ಚ2023 ರಂದು ಆನೆಗೊಂದಿ ರೋಡ ಲಲಿತ ಮಾಹಲ್ ಎದುರುಗಡೆ ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದವರು

ನಂತರ ಮಾತನಾಡಿದ ಶ್ರೀ ವೀರಮಹೇಶ್ವರ ಜಂಗಮ ಸಮಾಜ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಅವರು ಬೆಳಗ್ಗೆ 4 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಿರೇಜಂತಕಲ್ ಚಂದ್ರಗಿರಿ ಬೆಟ್ಟದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ ನಂತರ 7 ಗಂಟೆಗೆ  ಸಕಲ ವಾದ್ಯಗಳೊಂದಿಗೆ ಕಳಸ ,ಕುಂಭದೊಂದಿಗೆ ಸಕಲ ಜಂಗಮ ಭಂಧುಗಳು ಹಾಗೂ ವೀರಶೈವ ಸದ್ಭಕ್ತರು ಮಂಡಳಿಯೊಂದಿಗೆ  ಶ್ರೀ ರೇಣುಕಾಚಾರ್ಯ ಭಾವಚಿತ್ರದ ಶೋಭಾಯಾತ್ರೆಯು ಶ್ರೀ ಚನ್ನಬಸವಸ್ವಾಮಿ ಮಠದಿಂದ ಗಾಂಧಿ ಸರ್ಕಲ್  ಬಸವಣ್ಣ ಸರ್ಕಲ್, ಕೃಷ್ಣದೇವರಾಯ ಮೂಲಕ  ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಬಂದು ತಲುಪುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ವೀರಮಹೇಶ್ವರ ಜಂಗಮ ಸಮಾಜದ ಗೌರವ ಅಧ್ಯಕ್ಷ ಹುಚ್ಚಯ್ಯಸ್ವಾಮಿ ಹಾಲಿನಡೈರಿ,ಉಪಾಧ್ಯಕ್ಷರಾದ ಎಸ್.ಬಿ.ಹಿರೇಮಠ, ಪ್ರಧಾನ ಕಾರ್ಯದರ್ಶಿ ಆದಯ್ಯಸ್ವಾಮಿ ಹಿರೇಮಠ, ಸದಸ್ಯರಾದ ಶಿವಯ್ಯಸ್ವಾಮಿ ಹಿರೇಮಠ, ಅಮರಯ್ಯಸ್ವಾಮಿ ಜಾಲಿಹಾಳಮಠ, ಬಸಲಿಂಗಯ್ಯಸ್ವಾಮಿ ಅನ್ವಾರಿ ಹಿರೇಮಠ, ಮಂಜುನಾಥಸ್ವಾಮಿ ಹಿರೇಮಠ, ವೀರಯ್ಯಸ್ವಾಮಿ ಹಿರೇಮಠ, ಶಂಕ್ರಯ್ಯಸ್ವಾಮಿ ಹಿರೇಮಠ, ಸೇರಿದಂತೆ ಇತರರು ಇದ್ದರು

error: Content is protected !!