ರಾಯಚೂರು :ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯನಿಂದ ರಾಜಿನಾಮೆ

ದೇವದುರ್ಗ ಶಾಸಕ ಕೆ.ಶಿವನಗೌಡನಾಯಕ ಅವರ ಅಭಿವೃದ್ಧಿ ವಿಚಾರ ಇಲ್ಲದಿರುವುದನ್ನು ಕಂಡು ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಶರಣೇಗೌಡ ಸುಂಕೇಶ್ವಹಾಳ ಆರೋಪಿಸಿದರು.

ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಯನಾಡಿ, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರ ಆಡಳಿತಕ್ಕೆ ಬೇಸತ್ತು ಎಲ್ಲ ಮುಖಂಡರು ಸ್ವ ಹಿಚ್ಚೆಯಿಂದ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದೇವೆ ಎಂದರು.

ಕಳೆದ ಹದಿನೈದು ವರ್ಷದಿಂದ ಶಾಸಕರ ಪರವಾಗಿ ಹಾಗು ಪಕ್ಷದ ಪರವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿದ್ದು, ನಮ್ಮ ಬಗ್ಗೆ ಶಾಸಕರಿಗೆ ಗೊತ್ತಿದ್ದರು ಸಹ ಇತ್ತೀಚಿನ ದಿನಗಳ ಕಾರ್ಯಕರ್ತರ ಧೋರಣೆಯನ್ನು ಕಂಡು ರಾಜಿನಾಮೆ ನೀಡುತ್ತಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ಸಮಾನ ಮನಸ್ಕರ ಜೊತೆ ಚರ್ಚಿಸಿ‌ ರಾಜಕೀಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

error: Content is protected !!