
ಕೊಪ್ಪಳ :ಗಂಗಾವತಿ: – ಮಾರ್ಚ್ 6// ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಸಮ್ಮೇಳನ ವೇದಿಕೆಯ ಮುಂಭಾಗದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ರಾಷ್ಟ್ರ ಧ್ವಜಾರೋಹಣ ಮಾಡವಾಗ ಚಪ್ಪಲಿ ಹಾಕಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದಾರೆ ಎಂದು ನಗರದ ಪ್ರಜ್ಞವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಪರಣ್ಣ ಮುನವಳ್ಳಿಗೆ ರಾಷ್ಟ್ರ ಧ್ವಜದ ಮೇಲೆ ನಂಬಿಕೆ ಇಲ್ಲ ಅಥವಾ ಬೇಕಾ ಬಿಟ್ಟಿ ಧ್ವಜಾರೋಹಣ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

ಇಂದು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಸಾಹಿತ್ಯ ಸಮ್ಮೇಳನ ಮಾಡುವ ಉದ್ದೇಶಾದರು ಏನು,ಕಲೆ ನೆಲ ,ಜಲ,ಭಾಷೆ ಸಂರಕ್ಷಣೆ ಮಾಡುವುದಕ್ಕೆ ಸಮ್ಮೇಳನ ಮಾಡವುದು. ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದು ಏಕೆ? ಇಲ್ಲಿ ಎಲ್ಲಾ ಪ್ರಜ್ಞವಂತ ಸಾಹಿತ್ಯ ಜಿಲ್ಲಾ ಅಧ್ಯಕ್ಷರು,ತಾಲೂಕು ಅಧ್ಯಕ್ಷರು ಇದ್ದರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇವರಿಗೆ ಕನಿಷ್ಟ ಪರಿಜ್ಞಾನ ಕೂಡ ಇಲ್ಲ ಎಂದು ಸಾರ್ವಜನಿಕ ಛೀಮಾರಿ ಹಾಕಿದ್ದರು. ಇನ್ನೂ ಅಲ್ಲಿ ನೆರವೇರಿದ್ದ ಎಲ್ಲಾ ಪ್ರಜ್ಞವಂತ ಶಿಕ್ಷಕರು,ಸಾಹಿತ್ಯ ಅಭಿಮಾನಿಗಳು, ಕನ್ನಡದ ಹೋರಾಟಗಾರರು ಪ್ರಭಾವಿ ರಾಜಕೀಯ ಮುಖಂಡರು ಇದ್ದರು.ಇವರಿಗೆ ಚಪ್ಪಲಿ ಹಾಕಿ ಧ್ವಜಾರೋಹಣ ಮಾಡಿದ್ದು ಗಮನಕ್ಕೆ ಬಂದಿಲ್ಲ ಬಂದಿದ್ದರು ಕೂಡ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕನ್ನಡ ಅಭಿಮಾನಿಗಳು ರಾಜಸಾಬ್ ಹೊಸಪೇಟೆ ಸವಿಕಲಾ ವೇದಿಕೆ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.