
ಕೊಪ್ಪಳ :ಗಂಗಾವತಿ ನಗರದ ತಾಲೂಕು ಪಂಚಾಯತ್ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಇಂದು ಮುತ್ತಿಗೆ ಹಾಕಿದರು.
ಗ್ರಾಮ ಪಂಚಾಯಿತಿ ವೆಂಕಟಗಿರಿ ಜಂತಕಲ್ ಚಿಕ್ಕಬಣಕಲ್ ಗಾಣಾಪುರ ಸಂಗಾಪುರ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಲಿಕಾರರಿಗೆ ಕೆಲಸ ಇಲ್ಲದೆ ಗೂಳೆ ಹೋಗುತ್ತಿದ್ದು ಈ ಮೇಲಿನ ಗ್ರಾಮ ಪಂಚಾಯತಿ PDO ಗಳಿಗೆ ಆದೇಶವನ್ನು ನೀಡಿ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿಕಾರರಿಗೆ ಕೆಲಸವನ್ನು ನೀಡುವಂತೆ ಮತ್ತು ಈಗಾಗಲೇ ಕೂಲಿಕಾರರು ಕೆಲಸ ಮಾಡಿದ ಹಣವನ್ನು ಕೆಲವೊಂದು ಗ್ರಾಮ ಪಂಚಾಯಿತಿಯಿಂದ ಕೂಲಿ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ ಇದರಿಂದ ಕೂಲಿಕಾರರ ಜೀವನಕ್ಕೆ ತುಂಬಾ ಕಷ್ಟಕರವಾಗಿದ್ದು ಸದರಿ ಬಾಕಿ ಹಣವನ್ನು ಸಹ ಬಿಡುಗಡೆ ಮಾಡುವಂತೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅವರಲ್ಲಿ ಮನವಿ ಮಾಡಿಕೊಂಡರು.

ಮೇಟಿಗಳ ಪ್ರೋತ್ಸಾಹ ಧನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಆದರೆ ಇಲ್ಲಿವರೆಗೆ ಕೊಟ್ಟಿರುವುದಿಲ್ಲ ಅದನ್ನು ಸಹ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ನಮ್ಮ ಬೇಡಿಕೆಗಳು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಸಮರ್ಪಕವಾಗಿ ಜಾರಿಗೆ ಆಗಬೇಕು.
ತಾಲೂಕಿನ ಎಲ್ಲಾ ಪಂಚಾಯತಿಯಲ್ಲಿ ಕಾಯಕ ಬಂದುಗಳಿಗೆ ಪ್ರೋತ್ಸಾಹ ಧನ ನೀಡಬೇಕು.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ 100 ದಿನ ಕೆಲಸ ಕೊಡಬೇಕು ಕೆಲವು ಪಂಚಾಯತಿಗಳಲ್ಲಿ ಬಾಕಿ ಇರುವ ಕೆಲಸವನ್ನು ನೀಡಬೇಕು.
ಆಧಾರ್ ಕಾರ್ಡ್ ಕೈವಿಸಿ ನವೀಕರಣಗೊಳ್ಳದೆ ಇರೋದ್ರಿಂದ ಹಿಂದಿನಂತೆ ಕೂಲಿ ಹಣ ನೀಡಬೇಕು ಪಾವತಿಸಬೇಕು. ತಾಲೂಕಿನ ಎಲ್ಲಾ ಗ್ರಾಮದ ಕೂಲಿಕಾರರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಕುಡಿವ ನೀರು ನೆರಳಿನ ಅವಸ್ಥೆ ಆರೋಗ್ಯ ತಪಾಸಣೆಗಾಗಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕು.
ಚಿಕ್ಕ ಬೆಣಕಲ್ ಗ್ರಾಮದಿಂದ ಕಲಿಕೇರಿ ಕೆರೆಗೆ ಕಳಿಸಿದ ರೈತರ ಟ್ಯಾಕ್ಟರ್ ಬಾಡಿಗೆ ಹಣವನ್ನು ಇನ್ನೂ ಪಾವತಿಸಿಲ್ಲ ಪಾವತಿಸಬೇಕು.

ಜಾಬ್ ಕಾರ್ಡುಗಳನ್ನು ವಿಂಗಡಣೆ ಮಾಡಬೇಕು ಈ ಮೇಲಿನ ಎಂಟು ಬೇಡಿಕೆಗಳನ್ನು ಈಡೇರಿಸಲು ತಾಲೂಕು ಪಂಚಾಯತಿ ಇಓ ಅಧಿಕಾರಿಗಳ ಮುಂದೆ ಬೇಡಿಕೆಗಳನ್ನು ಬಗೆಹರಿಸುವoತೆ ಹೇಳಲಾಯಿತು ಶಿವಣ್ಣ ಬೆಣಕಲ್ ಅಧ್ಯಕ್ಷರು ಕೂಲಿಕಾರ ಸಂಘ ತಾಲೂಕು ಸಮಿತಿ ಹೇಳಿದರು.
ಇದಕ್ಕೆ ಪ್ರತಿಕ್ರಿಸಿದ ತಾಲೂಕು ಪಂಚಾಯಿತಿ ಇ ಓ ಅಧಿಕಾರಿಗಳು ಕ್ರಮೇಣವಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀನಿವಾಸ್ ಹೊಸಳ್ಳಿ ಪ್ರಧಾನ ಕಾರ್ಯದರ್ಶಿ ಸಂಗಪ್ಪ ಕುಷ್ಟಗಿ ಮುತ್ತಣ್ಣ ದಾಸನಾಳ ರಾಜೇಶ್ವರಿ ದಾಸ್ನಾಳ್ ಸರೋಜಾ ದಾಸನಾಳ ಹನುಮೇಶ್ ಬಣಕಲ್ ಗಾದೆಪ್ಪ ದುರ್ಗಪ್ಪ ಹನುಮಂತ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.