
ಇಂದು ಗಂಗಾವತಿ ಯಲ್ಲಿ 8 ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೆಳನವು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜರುಗಿತು
ಸರ್ವಾಧ್ಯಕ್ಷರಾದ ಶ್ರೀ ಸಿ.ಎಚ್ ನಾಡಿನಾಳ ಅವರನ್ನ ಸಾರೋಟಿನಲ್ಲಿ ನಗರದಾಂತ್ಯಂತ ಸಂಚರಿಸಿ ವಿವಿಧ ಕಾಲ ತಂಡಗಳೊಂದಿಗೆ ವೈಭವೊತೀತವಾಗಿ ವಿಜ್ರಂಭಣೆಯಿಂದ ಕೂಡಿದ ಮೆರವಣಿಗೆಯ ಮೂಲಕ ವೇದಿಕೆಗೆ ಬರ ಮಾಡಿಕೊಳ್ಳಲಾಯಿತು.
ಸಾಹಿತ್ಯ ಮತ್ತು ಸಾಂಸ್ಕೃತಿಕ ದೃವತಾರೆ ದಿ.ಶ್ರೀ ಗೊಂಡವಾಳ ಅವರ ವೇದಿಕೆಯಲ್ಲಿ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ, ಸರ್ವಾಧ್ಯಕ್ಷರಾದ ಶ್ರೀ ಸಿ.ಎಚ್.ನಾರಿನಾಳ ಅವರು ಕನ್ನಡ ಸಾಹಿತ್ಯ ಸಮ್ಮೆಳನದ ಜಿಲ್ಲಾಧ್ಯಕ್ಷರಾದ ಶ್ರೀ ಶರಣೇಗೌಡ, ತಾಲೂಕ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಅಂಗಡಿ ಅವರು ಹಾಗೂ ಮುಖಂಡರು ಜ್ಯೋತಿ ಬೆಳಗಿಸುವುದರೊಂದಿಗೆ ನಾಡಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಭವ್ಯ ವೇದಿಕೆಯಲ್ಲಿ ಕನಕಗಿರಿ ಶಾಸಕರಾದ ಶ್ರೀ ಬಸವರಾಜ ದಡೆಸೂಗೂರು, ಬಳ್ಳಾರಿ ಜಿಲ್ಲಾ ಸಹ ಪ್ರಭಾರಿಗಳಾದ ವಿರುಪಾಕ್ಷಪ್ಪ ಸಿಂಗನಾಳ, ವಿಜಯನಗರ ಜಿಲ್ಲಾ ಪ್ರಭಾರಿಗಳಾದ ಗಿರೇಗೌಡ ಹೊಸಕೇರಾ, ಮಾಜಿ ಕಾಢಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೆಂದ್ರ ಶೆಟ್ಟಿ, ರಾಯಚೂರು ಕೃಷಿ ವಿದ್ಯಾಲಯದ ಸದಸ್ಯರಾದ ಜಿ.ಶ್ರೀಧರ್, ಹಾಸ್ಯಬ್ರಹ್ಮ ಗಂಗಾವತಿ ಶ್ರೀ ಬಿ.ಚೀ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ದರಾಮಯ್ಯಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ದೊಡ್ಡಪ್ಪ ದೇಸಾಯಿ, ರಮೇಶ್ ಕುಲಕರ್ಣಿ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನ ಉದ್ದೇಶಿಸಿ ಜನಪ್ರಿಯ ಶಾಸಕರು ಕನ್ನಡ ನೆಲ ಜಲ ರಕ್ಷೆಗಾಗಿ ನಾವು ಪಕ್ಷಬೇದ ಮರೆತು ಕೆಲಸ ಮಾಡಬೇಕು ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ವನ್ನ ನಾವೆಲ್ಲರೂ ನೀಡಬೇಕು ಎಂದು ಮಾತನಾಡಿದರು
ನಂತರ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸರ್ವಾಧ್ಯಕ್ಷರಿಗೆ, ಜಿಲ್ಲಾಧ್ಯಕ್ಷರಿಗೆ, ತಾಲೂಕ ಅಧ್ಯಕ್ಷರಿಗೆ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು,
ಇದೆ ಸಮಯದಲ್ಲಿ ಸಾಹಿತ್ಯ ಪರಿಷತ್ ನಿಂದ ಶಾಸಕರನ್ನ ಗೌರವಿಸಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆ ಪಧಾದಿಕಾರಿಗಳು, ಕನ್ನಡ ಪ್ರೇಮಿಗಳು, ನಗರಸಭೆ ಸದಸ್ಯರು, ಹಿರಿಯರು, ಮುಖಂಡರು, ಉಪಸ್ಥಿತರಿದ್ದರು.