
ಕೊಪ್ಪಳ :ಗಂಗಾವತಿ ನಗರಸಭೆಯಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಅಮೃತ್ ಸಿಟಿ
ಯೋಜನೆಯಡಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ತನಿಖೆ ಮಾಡುವಂತೆ ಗಂಗಾವತಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ನಂತರ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಹೆಚ್ ವಸಂತ ಕುಮಾರ್ ಕಟ್ಟಿಮನಿ ಮಾತನಾಡಿ, ಗಂಗಾವತಿ ನಗರವು ಅಮೃತ ಸಿಟಿ ಯೋಜನೆ ಯಲ್ಲಿ ಆಯ್ಕೆಯಾಗಿರುತ್ತದೆ ಆದರೆ ಗಂಗಾವತಿ ಅಭಿವೃದ್ಧಿಗೆ ಆಯ್ಕೆಯಾಗಿರುತ್ತದೆ ಸದರಿ ಯೋಜನೆಯಡಿಯಲ್ಲಿ ಗಂಗಾವತಿ ನಗರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಆಗಿರುತ್ತದೆ ಆದರೆ ಗಂಗಾವತಿ ನಗರ ನಗರಸಭೆಯಲ್ಲಿ
ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿರುತ್ತದೆ. ಆದರೆ ಸದರಿ ಕಾಮಗಾರಿಗಳ ಸಾಕಷ್ಟು ದೂರುಗಳು ಗುಣಮಟ್ಟದ ಬಗ್ಗೆ ಸಾಕಷ್ಟು ಸಂಘಟನೆಗಳಿಂದ ವ್ಯಕ್ತವಾಗುತ್ತಿವೆ.ಮತ್ತು ಈ ಒಂದು ಕಾಮಗಾರಿಗಳ ಬಗ್ಗೆ ಮಾಧ್ಯಮಗಳಲ್ಲಿಯು ಸುದ್ದಿಗಳು ಪ್ರಸಾರವಾಗಿರುತ್ತವೆ. ಅಲ್ಲದೇ ಎಷ್ಟೋ ಕಾಮಗಾರಿಗಳು
ಅಪೂರ್ಣಗೊಂಡಿರುವುದಲ್ಲದೇ, ಇನ್ನು ಕೆಲವು ವಾರ್ಡುಗಳಲ್ಲಿನ ಸಾರ್ವಜನಿಕರಿಗೆ ರಸ್ತೆ,
ಚರಂಡಿ, ಕುಡಿಯುವ ನೀರು ಸರಬರಾಜು ಇತ್ಯಾದಿಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ.
ಹೀಗಿರುವಾಗ ಗಂಗಾವತಿ ನಗರವು ಅಮೃತ್ ಸಿಟಿ ಆಗಲು ಹೇಗೆ ಸಾಧ್ಯ ಆದ್ದರಿಂದ ಅಮೃತ್ ಸಿಟಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ನಡೆದ ಎಲ್ಲಾ ಕಾಮಗಾರಿಗಳನ್ನು ಸಮಗ್ರವಾಗಿ ತನಿಖೆಗೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಒತ್ತಾಯಿಸುತ್ತೆವೆ. ಒಂದು ವೇಳೆ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ ತಾಲೂಕು ಅಧ್ಯಕ್ಷ ಮಾತನಾಡಿ ಅಮೃತ್ ಸಿಟಿ ಯೋಜನೆಯಲ್ಲಿ ನಡೆದ ಎಲ್ಲಾ ಕಾಮಗಾರಿಗಳನ್ನು ಸಮಗ್ರ ತನಿಕೆ ಮಾಡಿ. ಇದರಲ್ಲಿ ಅಕ್ರಮ ಎಸಿಗಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಹಂಚಿನಾಳ ಮತ್ತು ಮಲ್ಲೇಶ್ ತಾಲೂಕು ಅಧ್ಯಕ್ಷರು ಇತರರು ಉಪಸ್ಥಿತರಿದ್ದರು.